ಒಂದೊಳ್ಳೆ ಸಂದೇಶ ಹೊತ್ತು ತಂದಿರುವ ಈ ಚಿತ್ರ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕಲೆ ಸಾಹಿತ್ಯ ಕ್ರೀಡೆಗಳು ಜೀವನ ರೂಪಿಸುತ್ತವೆ ವಿದ್ಯಾರ್ಥಿಗಳ ಆಸಕ್ತಿಗೆ ಬೆಂಬಲ ಕೊಡಬೇಕು ಅನ್ನುವುದರ ಜೊತೆಗೆ ಹೇಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣ ಗೊಳಿಸಿವೆ ಎನ್ನುವುದನ್ನ ತೋರಿಸುತ್ತ ವಿದ್ಯಾರ್ಥಿಗಳು ಹೇಗೆ drugs ಗೆ ಅಡಿಕ್ಟ್ ಆಗ್ತಾ ಇದಾರೆ ಎನ್ನುವುದನ್ನ ಎಳೆ ಎಳೆಯಾಗಿ ಹೇಳ್ತಾ ಗುರುವಿನ ಮಹತ್ವ ತಿಳಿಸುತ್ತಾ ಹೋಗುತ್ತದೇ.
ಹೀರೊ ಸರ್ಕಾರಿ ಕಾಲೇಜನ್ನ ಉಳಿಸುವ ಸಲುವಾಗಿ ಹೇಗೆ ವ್ಯವಸ್ಥೆಯ ವಿರುದ್ದ ಹೊರಡುತ್ತಾನೆ ಎನ್ನುವುದೇ ಒಂದೆಳೆ ಕಥೆ ಹಾಗೆ ಇಲ್ಲಿ ಪುನೀತ್ ಜೊತೆಗೆ ಮತ್ತೊಬ್ಬ ಹೀರೊ ಇದ್ದು ಅವರೇ ಪ್ರಕಾಶ್ ರಾಜ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಹೀರೋಯಿನ್ ಸಯೇಶ ಪಾತ್ರ ಚೆನ್ನಾಗಿದ್ದು ಅಂತಹದ್ದೇನು ಮಹತ್ವತೆ ಪಾತ್ರಕಿಲ್ಲ..ತಮನ್ ಉತ್ತಮ ಸಂಗೀತ ನೀಡಿದ್ದು ಚಿತ್ರದ್ದುದ್ದಕ್ಕೂ ಪ್ರೇಕ್ಷಕರರನ್ನ ಹಿಡಿದು ಕೂರಿಸುತ್ತದೆ . ಅಲ್ಲಲ್ಲಿ ಶಿವಾರಾಜ್ ಕುಮಾರ್ ರೆಫರ್ನ್ಸ್ ರಾಜಕುಮಾರ್ ರೆಫರೆನ್ಸ್ ಇರೋ ಡೈಲಾಗ್ ಗಳು ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ.
ನೀವೊಬ್ಬರು
ಉತ್ತಮ ಸಂದೇಶವುಳ್ಳ ಕುಟುಂಬ ಸಮೇತರಾಗಿ ನೋಡಬಹುದಂತಹ ಯಾವುದೇ ನಾನ್ ವೆಜ್ ಜೋಕ್ ಗಳು ಇಲ್ಲದಂತ ಫ್ಯಾಮಿಲಿ ಪ್ಯಾಕೇಜ್ ಸಿನಿಮಾದ ಪ್ರೇಮಿಗಳಾಗಿದ್ದರೆ ಇನ್ನೇಕೆ ತಡ .....
#Sanketha Gm Thirthahalli
No comments:
Post a Comment