ಈ ಸಿನಿಮಾದ ಕಂಟೆಂಟ್ ಸರಳವಾದದ್ದು ಆದರೂ ತೆರೆಮೇಲೆ ಹೆಣೆದಿರುವ ರೀತಿ ಅದ್ಭುತ ಅತ್ಯದ್ಭುತ ಅಮೋಘ..
ಚಿತ್ರ ಕೊಂಚ ನಿಧಾನವಾಗಿ ವಾಗಿ ಸಾಗ್ತಾ ಇದ್ರು ಸಹ ಸಾಮಾನ್ಯವಾಗಿ ಕೇಲವೊಂದು ಚಿತ್ರಗಳಲ್ಲಿ ಶಾಟ್ ಗಳನ್ನ ನೋಡಿ ಮುಂದೆ ಹೀಗೆ ಆಗಬಹುದು ಎಂದು ಊಹಿಸಬಹುದು ಆದರೆ ಖಂಡಿತ ಇಲ್ಲಿ ಅದು ಸಾಧ್ಯವಿಲ್ಲ .
ನಿರ್ದೇಶಕ ಇಲ್ಲಿ ಯಾವುದೇ ಕಲ್ಪನ (Fantasy) ಯಲ್ಲಿ ಪ್ರೇಕ್ಷಕರನ್ನ ತೇಲಿಸುವ ಪ್ರಯತ್ನವೇ ಮಾಡಿಲ್ಲ ಇಲ್ಲಿ ಎಲ್ಲವೂ ನೈಜತೆಗಳನ್ನ ಒಳಗೊಂಡಿದೆ ಪ್ರತಿಯೊಂದು ಸಾಮಾನ್ಯ ಜನರ ಜನ ಜೀವನಗಳ ಒಳಗೊಂಡಿದೆ.
ಮೂವಿ ಫ್ರೆಮ್ to ಫ್ರೆಮ್ ಅದ್ಭುತವಾಗಿ ಮೂಡಿ ಬಂದಿದ್ದು.. ಪೊಲೀಸರು ಬಂದಾಗ ಊರಿನವರೆಲ್ಲ ದೊಡ್ಡ ನೀರಿನ ಟ್ಯಾಂಕ್ ಮೇಲೆ ಅಡಗಿ ಕೂತಿರುತ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ ಅಷ್ಟು ಅದ್ಭುತವಾಗಿದೆ ಆ ದೃಶ್ಯ.. ಕುದುರೆ ಓಡಿಸದ ಬಾಲಕ ಊರಿಗಾಗಿ ಕುದುರೆ ಹತ್ತಿ ಹೋಗುವುದು ರೋಮಾಂಚನಕಾರಿ ಆಗಿದೆ..
ಮೊದಲಾರ್ಧದಲ್ಲಿ ಕುಂಟುತ್ತಾ ಸಾಗುವ ಕತ್ತೆಯ ಕಾಲಿನಂತೆ ಮೊದಲಾರ್ಧ ನಿಧಾನವಾಗಿ ಇತ್ತು ಆದ್ರೆ ಖಂಡಿತ ಸಪ್ಪೆ ಆಗಿರಲಿಲ್ಲ.. ಕತ್ತೆಯ ಕಾಲಿನ ಹಗ್ಗ ಕಡಿದ ನಂತರ ಮೂವಿಯ ಓಟ ಕ್ಕೆ ಎಲ್ಲೆಯಿಲ್ಲ.. ನಿಮ್ಮನ್ನ ಪ್ರತಿ ಸೆಕೆಂಡ್ ಹಿಡಿದಿರುಸುತ್ತದೆ. ಅಲ್ಲಲ್ಲಿ ಧನುಷ್ ತೀರಿ ಹೋದ ತಂಗಿಯ Referance ವಿಭಿನ್ನವಾಗಿದೇ.
ಹಳ್ಳಿ ಯ ಜೀವನ , ಹಳ್ಳಿಯ ಅವ್ಯವಸ್ಥೆ ಕೆಟ್ಟ ವ್ಯವಸ್ಥೆಯ ವಿರುದ್ಧ ಪೊಲೀಸರ ದರ್ಪ ಎರಡು ಊರಿನ ನಡುವಿನ ವೈಷಮ್ಯ ದ ನಡುವಿನ ಹೋರಾಟವೇ ಈ ಕರ್ಣನ್..
ಒಟ್ಟಾರೆ ಬಿಜಿಎಮ್ ಬೆಂಕಿ.. ಸಿನಿಮಾಟೋಗ್ರಾಫಿ ಚಿಂದಿ. ಪ್ರತಿಯೊಬ್ಬರ ನಟನೆಯು ಅಮೇಜಿಂಗ್.
ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದ್ದು ಚಿತ್ರ ಟೈಮ್ ಇದ್ದಾಗ ಬಿಡುವು ಇದ್ದಾಗ ನೋಡಿದ್ರು ಅಥವಾ ನೀವೇ ಬಿಡುವು ಮಾಡಿಕೊಂಡು ಟೈಮ್ ಮಾಡಿಕೊಂಡು ನೋಡಿದ್ರು ಏನು ತೊಂದರೆ ಇಲ್ಲ ಅಂತಹದೊಂದು ಅದ್ಭುತ ಚಿತ ಕರ್ಣನ್..
Howdh howdh
ReplyDelete