ಮಲೆನಾಡು ಅಂದರೆ ಒಮ್ಮೆಲೇ ಕಣ್ಣು ಮುಂದೆ ಕಂಪಿಸೋದು ಮಳೆ ಹಸಿರಿನ ದಟ್ಟ ಕಾಡುಗಳು ವಿಪರೀತವಾದಂತಹ ಮಳೆ ಅಷ್ಟೇನಾ ಮಲೆನಾಡು ಅಲ್ಲವೇ ಅಲ್ಲ ವಿವಿಧ ಸಂಸ್ಕೃತಿ ಆಚರಣೆಗಳು ಹೊಸ್ತಿನ ಮನೆ ,ದಯ್ದರ್ಕ್ಕೆ . ಮಾಲಾಯ, ಇಂತಹ ಎಷ್ಟೋ ಆಚರಣೆಗಳು ಸಹ ಇವೆ.ಹೇಳಿದ್ದೆ ಎಷ್ಟು ಬಾರಿ ಹೇಳೋದು ಮಾದ್ಯಮಗಳಂತೂ ಮಲೆನಾಡನ್ನು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ನೆಲವೆಂದು ಬಣ್ಣಿಸುವರು. ಇಂತಹ ಮಲೆನಾಡಲ್ಲಿ ಇಂದು ಭತ್ತದ ಗದ್ದೆಗಳೆಲ್ಲ ದುರ್ಭಿನು ಹಾಕಿ ಹುಡುಕುವ ಹಂತಕ್ಕೆ ಬಂದು ತಲುಪಿವೆ. ರಸ್ತೆಗಳಿಗೆ ಹತ್ತಿರವಾಗಿ ಇದ್ದ ಗದ್ದೆಗಳು layout ಗಳಾಗಿ ನಿವೇಷನಗಳಾಗಿ ಬದಲಾವಣೆಯಾಗಿ ವಾಣಿಜ್ಯ ಉದ್ದೇಶಗಳಿಗೆ ಮಾರ್ಪಾಡದರೆ, ಗದ್ದೆಗಳು ನೀಲಗಿರಿ , ಅಕೇಶಿಯ, ಅಡಿಕೆ ತೋಟಗಳಾಗಿ ರೂಪುಗೊಂಡಿವೆ.ಇನ್ನೂ ಉಳಿದ ಗದ್ದೆಗಳಲ್ಲಿ ಭತ್ತ ನಾಟಿ ಇದ್ದರು ಹಿಂದಿದ್ದ ಕಳೆ ಖುಷಿ ಇಲ್ಲ, ಗಾಜನೂರು ಆಳುಗಳೊ , ಇನ್ನಿತರ ನವನವೀನ ಯಂತ್ರೋಪಕರಣಗಳ ಸಹಾಯದಿಂದ ಒಂದೋ ಎರಡೋ ದಿನಕ್ಕೆ ಗದ್ದೆ ನಟ್ಟಿ ಮುಗಿದು ಜನ ಮನೆ ಸೇರುತ್ತಾರೆ.
ಆದ್ರೆ ಮೊದಲು ಹೀಗಿರಲಿಲ್ಲ , ಗದ್ದೆ ನಟ್ಟಿಯ ಮೊದಲ ಹಂತ ಶುರು ಆಗ್ತಿದ್ದಿದ್ದು ಜೂನ್ ಶುರುವಿನಲ್ಲಿ ಮೊದಲ ಮುಂಗಾರು ಸಿಂಚನವಾದಗ ಗದ್ದೆ ಹೊಳ್ಕೆ ಶುರು ಆಗುತಿತ್ತು( ಹೋಳ್ಕೆ ಮೊದಲ ಹಂತದ ಉಳುಮೆ) ಮಾಡಿ ಸಸಿ ಹಾಕಲು ರೆಡಿ ಆಗುತ್ತಿದ್ದರು , ಜೂನ್ ಹದಿನೈದು ಹದಿನಾರಕ್ಕೆ ಗದ್ದೆಯಲ್ಲಿ ನೀರಾಗಿ ಸಸಿ ಹಾಕಲು ಯೋಗ್ಯವಾಗಿರುವಂತೆ ಭೂಮಿ ಮಾರ್ಪಾಡಗಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಮಲೆನಾಡಿನ ರೈತರು ಮೈಯಳಿಗೆ ಕೆಲಸಕ್ಕೆ ಹೋಗುವುದರ ಮೂಲಕ ಗದ್ದೆ ನಾಟಿಯ ಕೆಲಸವನ್ನು ಆರಂಭಿಸುತ್ತಿದ್ದರು.. ಮೊದಲು ಹಳ್ಳದಲ್ಲಿ ಗೋಣಿಚೀಲದಲ್ಲಿ ಒಳ್ಳೆಯ ಐಟಿ , ಜೋಳಗ , ಹೆಗ್ಗೆ ಮೊಳಕೆಯ ಭತ್ತಗಳನ್ನು ಕಟ್ಟಿ ಹಳ್ಳದಲ್ಲಿ ನೆನೆಹಾಕಿರುತ್ತಿದ್ದರು. ನಂತರ ಎತ್ತಿನ ಜೋಡಿಗೆ ಹೇಳಿ ಅಗಡಿ ರೆಡಿ ಮಾಡುತ್ತಿದ್ದರು , ಅಗಡಿಯಲ್ಲಿ ನಳ್ಳಿ ಯಿಂದ ಸಮತ್ತಟ್ಟ ಮಾಡಿ ಭತ್ತ ಬಿತ್ತನೆ ಮಾಡುತ್ತಿದ್ದರು , ಭತ್ತದ ಸಸಿ ನಾಟಿ ಮಾಡಲು ಯೋಗ್ಯವಾದಗ ನಾಟಿ ಕಾರ್ಯ ಶುರು ಮಾಡುತಿದ್ದರು.
ಮಲೆನಾಡಲ್ಲಿ ನಾಟಿ ಕಾರ್ಯ ಶುರುವಾದರೆ ಒಂಥರ ಹಬ್ಬದ ವಾತರವರಣವೇ ಸರಿ ಊರವರೆಲ್ಲ ಸೇರಿ ಗುಂಪಾಗಿ ಮೈಯಳಿಗೆ ಬ್ಯಾಚ್ ಮಾಡಿ ಗೋರಬು ಹೊತ್ತು ಹೆಂಗಸರು ಹರಟೆ ಹೊಡೆಯುತ್ತ ಮುದುಕಿಯರು ಎಲೇ ಅಡಕೆ ಸುಣ್ಣದ ಡಬ್ಬಿ ಒಂಚೂರು ತಂಬಾಕು ಹಿಡಿದು ಗಂಡಸರು ಹಾರೆ ಬುಟ್ಟಿ ಹಿಡಿದು ಗದ್ದೆಗೆ ಇಳಿಯುವರು