ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂಡೆ ಮಾಡಿಕೊಂಡು ಬಳೆದಿದ್ದ ಕರಿನೆಲ. ಕರಿನೆಲದಮೇಲೆ ಓಡಾಡಿ ಪಾದ ಮೈಕೈ ಕಪ್ಪಾಗಿರುತ್ತಿದ್ದವು.ಅಂತೆಯೇ ಮನೆಯೇ ಆಚೆ ಈಚೆಯೆ ಕೋವಿ ಹಿಡಿದು ಹೋದರೆ ಬರುವಾಗ ಕೈಯಲ್ಲಿ ಮೊಲ ಹೊಡೆದು ತರುತ್ತಿದ್ದದ್ದು, ಮನೆಯ ತುಂಬಾ ಮಕ್ಕಳು ಅಜ್ಜಿಯ ಆರೈಕೆ, ಅಂದು ಸಂಜೆ ಆರು ಗಂಟೆಯ ಒಳಗೆ ಊಟ ಮಾಡಿ ಬಡಿಸಿ ಮಲಗಿಸಿರುತ್ತಿದ್ದರು ಮಕ್ಕಳನ್ನ ಕಾರಣ ಆ ಹಿಂದೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ ಹಾಗೆಯೇ ಬೆಂಕಿ ಪೊಟ್ಟಣ ದ ಒಂದು ಕಡ್ಡಿಯನ್ನ ಉರಿಸಿಲಿಕ್ಕೋ ಬಡತನ ಆದ್ದರಿಂದ ಸಂಜೆಯ ಸಮಯಕ್ಕೆ ಸರಿಯಾಗಿ ದೊಡ್ಡ ಮರದ ತುಂಡನ್ನು ಒಲೆಗೆ ಹಾಕಿ ಮಲಗುತ್ತಿದ್ದರು ಯಾಕಂದರೆ ಬೆಳಗ್ಗೆ ಅದನ್ನ ಉರಿಸಿ ಬೆಂಕಿ ಮಾಡಲು.
ಆ ಕಾಲದಲ್ಲಿ ಹಸಿ ಏಡಿಯ ಕಡೆದು ಸಾಂಬರ್ ಮಾಡುವುದೇ ಒಂದು ವಿಶೇಷ ಮತ್ತು ಹಾಗೆಯೇ ಚಗಳಿ ಇರುವೆಯ ಚಟ್ನಿ ಮಲೆನಾಡಿನಲ್ಲಿ ಅಂದು ಮಾಡ್ತಾ ಇದ್ದರಂತೆ . ಹಾಗೆಯೇ ಗೇಣಿಗೆ ಗದ್ದೆಗಳನ್ನು ಮಾಡುತ್ತ ತಿಂಗಳುಗಟ್ಟಲೆ ಗದ್ದೆನೆಡುವುದು ತಿಂಗಳುಗಟ್ಟಲೆ ಗದ್ದೆ ಕೊಯ್ಯುವುದು ಭತ್ತ ಕುಟ್ಟುವುದೇ ಕೆಲಸ ವರ್ಷಪ್ರತಿ ಎಲ್ಲರಿಗೂ.ಅದರ ಮದ್ಯೆ ಕಬ್ಬಿನ ಕೋಪ್ಪುರಿಗೆ ತೊಳೆದ ನೀರಿನ ಸಾರಾಯಿ ಮನೆಯಲ್ಲಿ ಮಾಡಿಟ್ಟಿರುತ್ತಿದ್ದರು.ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಹುಲಿಭತ್ತ ಹೇರಕುವುದೇ ಕೆಲಸ, ಹುಲಿಭತ್ತ ಹೇರಕಿದ ದುಡ್ಡಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನಡೆದುಕೊಂಡು ಹೋಗುವುದು ಮತ್ತು ವರ್ಷಕ್ಕೊಮ್ಮೆ ಜಾತ್ರೆಯಲ್ಲಿ talkis ನಲ್ಲಿ ಫಿಲ್ಮ್ ನೋಡಿದರೇನೋ ಖುಷಿ.ಗೌರಿ ಹಬ್ಬದ ಸಮಯದಲ್ಲಿ ಮೀನು ಇಳಿದು ಹೋಗೋ ಸಂದರ್ಭದಲ್ಲಿ ಹಿಡಿದ ಮೀನುಗಳನ್ನ ಬಿಸಿಲುಕಣೆ ಮೇಲೆ ಹಾಕಿ ಒಣಗಿಸಿ ಶೇಕರಿಸಿಟ್ಟುಕೊಳ್ಳೋದು ನಡೀತಿತ್ತು. ಬೇಕಾದಾಗ ಅದನ್ನ ಬಳಸಿಕೊಳ್ಳೋತ್ತಿದ್ದರು ಅದಕ್ಕೆ ಡಿಮ್ಯಾಂಡೋ ಡಿಮ್ಯಾಂಡ್ ನೆರೆಮನೆಯವರೆಲ್ಲ ನಮಗೂ ಸ್ವಲ್ಪ ಕರಿಮೀನು ಕೊಡಿ ಅಂತ ಬಂದು ನಿಂತಿರುತ್ತಿದ್ದರು.ಭತ್ತ ಕುಟ್ಟಿ ಆದ ನಂತರ ಭತ್ತದ ಮೊಳಕೆ ಕಟ್ಟಿ ಮನೆಮನೆಯಲ್ಲೂ ಹೆಂಡದ ಗಮ್ ಅನ್ನುವ ವಾಸನೆ ಮೂಗಿಗೆ ಬಡಿಯುವುದು ಪ್ರತಿ ಮನೆಯಲ್ಲೂ ಸಾಮಾನ್ಯವೆ ಸರಿ.ಮದುವೆಮನೆ ಅಥವಾ ಯಾವುದೇ ಸಮಾರಂಭಗಳಲ್ಲಿ ಚೀನಿ ಕಾಯಿಯ ಪಲ್ಯ ಮಾಡಿದರೆ ಹೆಚ್ಚು ಮತ್ತು ನೆಂಟರು ಬಂದಾಗ ಆಲೂಗೆಡ್ಡೆ ಪಲ್ಯ ಮಾಡಿದರೆ ಬಂದ ನೆಂಟರಿಗೆ ಇಂದು ಚಿಕನ್ ಮಟನ್ ಮಾಡಿದಷ್ಟು ಸಂತಸ.ದನ ಮೆಯಿಸೋದು ದನ ಸಂಜೆ ಸಮಯಕ್ಕೆ ಮನೆಗೆ ಹೊಡೆದುಕೊಂಡು ಬರುವಾಗ ಸುಮ್ಮನೆ ಬರುತ್ತಿರಲಿಲ್ಲ ಬೆತ್ತದ ಬುಟ್ಟಿ ಗಳನ್ನ ಮಾಡಿ ದನದ ಜೊತೆ ಮನೆಗೆ ಬರುತ್ತಿದ್ದರು.ಕಡುಬಡತನವಿದ್ದರು ಇತರರ ಮನೆಗೆ ಕೆಲಸಕ್ಕೆ ಹೋಗುವವರು ಕಡಿಮೆಯೇ ಇದ್ದರು ಅವರವ ಮನೆಗೆ ಏನು ಬೇಕೋ ಅದನ್ನ ಬೆಳೆದುಕೊಳ್ಳುವಲ್ಲಿ ಸ್ವಾವಲಂಬನೆ ಹೊಂದಿದ್ದರು .ಆ ಸಮಯದಲ್ಲಿ ದುಡ್ಡಿನ ಅವಶ್ಯಕತೆ ಬರುತ್ತಿದ್ದದ್ದೇ ಕಡಿಮೆ ಆಗಿರುತ್ತಿತ್ತು.ಎಷ್ಟೋ ದಿನ ಹೊಸಾಳೆ ಯಲ್ಲೆ ಕಾಲ ಕಳೆಯುತ್ತಿದ್ದರು. ಹೊಸಾಳೆ ಅಂದರೆ ಖಾರ ಕಡೆದು ಕೊನೆಯಲ್ಲಿ ಖರಾದ ಕಲ್ಲಿನಲ್ಲಿ ಉಳಿದ ಖರಕ್ಕೆ ಉಪ್ಪು ಹುಳಿ ಸೇರಿಸಿ ಬಳಸುವುದು.
ಅಂಗಡಿಗೆ ಸೋಪು ಶಾಂಪು ಅಂತ ಒಂದಿನ ತೆರಳಿದ್ದು ಸಹ ಇಲ್ಲ ಶೀಗೆ ಕಾಯಿ,ಅಂಟೋಲ ಕಾಯಿಯೇ ಮೈ ಸ್ವಚ್ಛಗೊಳಿಸುವ ಸಾಬೂನುಗಳಾಗಿದ್ದವು.ನಾವಿಂದು ಖರ್ಚು ವೆಚ್ಚಕ್ಕೆ ತಲೆ ಕೆಡಿಸಿಕೊಳ್ಳದೆ ದುಂದು ವೆಚ್ಚ ಮಾಡುತ್ತೇವೆ ಆದರೆ ಹಿಂದಿನವರು ಬಸ್ಸಿನಲ್ಲಿ ಕಂಡಕ್ಟರ್ ಒಂದು ರೂಪಾಯಿ ಚಿಲ್ಲರೆ ಕೊಡದಿದ್ರು ಜಗಳಕ್ಕೆ ನಿಂತಿರುತ್ತಾರೆ ಕಾರಣ ಇವೆಲ್ಲ ಕಷ್ಟ ಜೀವನದಲ್ಲಿ ಅನುಭವಗಳನ್ನ ಎದುರಿಸಿ ಬಂದಿರುತ್ತಾರೆ.1970 ಯಲ್ಲಿ ಹಣವಿರಲಿಲ್ಲ ಕಾಯಿಲೆ ಇರಲಿಲ್ಲ ಹಸಿವಿತ್ತು ಆದರೆ ನೆಮ್ಮದಿ ಸಂತೋಷಕ್ಕೆನು ಬರವಿರಲಿಲ್ಲ.
Thursday, 7 December 2017
1970 ರಲ್ಲಿ ಹೀಗಿತ್ತಂತೆ ಮಲೆನಾಡು
Subscribe to:
Post Comments (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...

-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿ...
-
ನೆನಪಿನ ಮನೆಯಲಿ ಒಂದು ಕೋಣೆ ತೆಗಿದಿದೆ. ನನ್ನ ಕರೆದಿದೆ,ಬಾಲ್ಯವ ತೆರೆದು ಕಣ್ಣಿಗೆ ಮುಸುಕು ಬಂದಿದೆ. ಮರೆತ ಮನವು ನೆನಪುಗಳೊಡನೆ ಸಾಗಿದೆ. ನಾ ತಿಳಿಯದೆ, ಬಾಲ್...
Beautiful......nanna balya nenapayithu....adbhuthavada lekhana.tnq
ReplyDeletethank you .ಸದಾ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ReplyDeletethank you .ಸದಾ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
ReplyDelete