ಮಲೆನಾಡು ಅಂದ್ರೆ ನೆನಪಾಗೋದು ಚಿಕ್ಕಮಗಳೂರು ಶಿವಮೊಗ್ಗ. ಆ ಶೃಂಗೇರಿ ಹೊಸನಗರ ತೀರ್ಥಹಳ್ಳಿ ಊರಿಗೆ ನಿಸರ್ಗವೇ ಸೀರೆಯಾಗಿ ಹೊದ್ದುಕೊಂಡು ನಿಂತಿರುವಂತೆ ಭಾಸವಾಗುತ್ತದೆ ಸಾಮಾನ್ಯವಾಗಿ .ಮಲೆನಾಡಿನಲ್ಲಿ ವೈವಿಧ್ಯಮಯ ಪಕ್ಷಿ ಸಂಕುಲ ಪ್ರಾಣಿಸಂಕುಲಗಳಿಗೆ ಆಶ್ರಯ ತಾಣವಾಗಿದೆ ಅದೆಲ್ಲಾನೂ ಬಿಟ್ಟು ಮತ್ತೊಂದಿದೆ ಗಿಡಮೂಲಿಕೆಗಳ ತಾಣವು ಹೌದು.ಇಂದು ಆ ಗಿಡಮೂಲಿಕೆಯ ಗಿಡಗಳು ಕಾಲು ಬುಡದಲ್ಲಿದ್ದರು ಅದನ್ನ ತಿಳಿಯಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಲ್ಲಾದಕ್ಕೂ ಕಾರಣ ನಮ್ಮಲ್ಲಿಲ್ಲವಾದ ಆಸಕ್ತಿ ಮತ್ತು ಇಂಗ್ಲೀಷ್ ಮೆಡಿಸಿನ್ ನ ಅಗಾಧವಾದ ಪ್ರಭಾವ ಇಷ್ಟೇ ಅನ್ಕೋಬೇಡಿ ಇನ್ನೂ ಒಂದು ಪ್ರಮುಖವಾದ ಸಂಗತಿ ಇದೆ ಅದೇನೆಂದರೆ ಮೂಢನಂಬಿಕೆ ಅಂತ ಹೇಳಬೇಕೋ ಅಜ್ಞಾನವೋ ತಿಳಿಯುತ್ತಿಲ್ಲ ಅದು ನಿಮಗೆ ಬಿಟ್ಟಿದ್ದು ಓದುಗರೇ ಊಹಿಸಿಕೊಳ್ಳಿ.ಈ ಮೂಢನಂಬಿಕೆ ಅಂತಾ ಹೇಳಿ ಸುಮ್ಮನೆ ಕೂತರೆ ಹೇಗೆ ಅದರ ಬಗ್ಗೆ ವಿವರಣೆ ಹೀಗಿದೇ ಹಿಂದೆ ಮತ್ತು ಈಗಲೂ ಸಹ ಕೆಲವೆಡೆ ಗಿಡಮೂಲಿಕೆ ಪದ್ದತಿ ಇದ್ದರು ಸಹ ಹಲವೆಡೆ ನಶಿಸಿ ಹೋಗಿದೆ ಹಿಂದೆ ನಮ್ಮ ಸುತ್ತಮುತ್ತಲಿನಲ್ಲೆ ಮಕ್ಕಳಿಗೆ ಕಫಾ ಗೆ ಔಷದಿ ಕೊಡುವವರು,ಕಣ್ಣಿನ ಹೂವಿಗೆ ಔಷದಿ ಕೊಡುವವರು , ಇನ್ನೂ ಇತರೇ ಔಷದಿ ಕೊಡುವವರು ಇದ್ದರು ಅವರೆಲ್ಲರೂ ಸಹ ಗಿಡಮೂಲಿಕೆಗೆ ಬಳಸುವುದು ಏನೆಂದು ಇನ್ನೊಬ್ಬರಿಗೆ ಹೇಳದೆ ಇದ್ದುದು ಇಂದು ಗಿಡಮೂಲಿಕೆ ನಶಿಸಲಿಕ್ಕೆ ಬಹಳ ಮುಖ್ಯ ಕಾರಣ.ಔಷದಿ ಮಾಡುವವರು ಯಾವ ಯಾವ ಗಿಡಮೂಲಿಕೆ ಸಸ್ಯಗಳನ್ನು ಬಳಸುತ್ತೇವೆ ಎಂದು ಹೇಳಿದರೆ ಗಿಡಮೂಲಿಕೆಯ ಪ್ರಭಾವ ಫಲಾನುಭವಿಗಳಿಗೆ ಆಗುವುದಿಲ್ಲ ಎಂಬಾ ನಂಬಿಕೆ.ಇಂದು ಎಷ್ಟೋ ಕಾಯಿಲೆಗಳಿಗೆ ಆಂಗ್ಲ ಮೆಡಿಸಿನ್ ಬಂದಾಗಿಯೂ ಸಹ ಬಾರಿ ಡಿಮ್ಯಾಂಡ್ ಇರೋದು ಮಕ್ಕಳ ಕಫ ತೆಗಿಯುವ ವಿಧಾನದ ಗಿಡಮೂಲಿಕೆಗೆ, ಆ ಗಿಡಮೂಲಿಕೆ ಹೇಗೆಂದು ನಿಮ್ಮ ಮುಂದೇ ವಿವರಿಸೋಣ ಎಂದರೆ ಗಿಡಮೂಲಿಕೆ ಮಾಡುವವರು ನಮಗೂ ಹೇಳಬೇಕಲ್ಲ.
ಹೀಗೆ ಒಂದಿನ ದಾರಿಯಲ್ಲಿ ನಡ್ಕೊಂಡು ಹೋಗ್ಬೇಕಾದ್ರೆ ಗಿಡದ ಪೊದೆಯೊಳಗೆ ಏನೋ ಶಬ್ದ ಹೋಗಿ ನೋಡಿದೆ ಒಬ್ಬರೇ ಇದ್ದರು ಏನೋ ಬಳ್ಳಿಯ ಬೇರನ್ನು ಅಗೆದು ಕೀಳುತ್ತಿದ್ದರು ಹತ್ತಿರ ಹೋಗೋದಕ್ಕೂ ಬಿಡದೆ ಬೇರೆಯೇ ಮಾತನಾಡಿ ಕಳಿಸಿಬಿಟ್ಟಿದ್ದರು. ಹೀಗೆ ಆಯುರ್ವೇದ ಮಾಡುವವರು ಯಾರಿಗಾದರೂ ಮೂಲಿಕೆಕೊಡುವಾಗ ಯಾರ ಬಳಿಯೂ ಮಾತಾನಡುವುದಿಲ್ಲ ಯಾರಿಗೂ ಏನು ಬಳಕೆ ಮಾಡಿದ್ದೇವೆ ಎಂದು ಕಿಂಚಿತ್ತೂ ಮಾಹಿತಿಯನ್ನು ನೀಡದೆ ಭಾರತದ ಅತ್ಯಮೂಲ್ಯ ಪದ್ದತಿಯನ್ನು ಉಸಿರು ನಿಲ್ಲುವುದರೊಂದಿಗೆ ತಮ್ಮೊಡನೆ ಕರೆದೊಯ್ಯುವರು.
Saturday, 9 December 2017
ಗೊತ್ತಿರೋ ಸತ್ಯ
Subscribe to:
Post Comments (Atom)
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...

-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿ...
-
ನೆನಪಿನ ಮನೆಯಲಿ ಒಂದು ಕೋಣೆ ತೆಗಿದಿದೆ. ನನ್ನ ಕರೆದಿದೆ,ಬಾಲ್ಯವ ತೆರೆದು ಕಣ್ಣಿಗೆ ಮುಸುಕು ಬಂದಿದೆ. ಮರೆತ ಮನವು ನೆನಪುಗಳೊಡನೆ ಸಾಗಿದೆ. ನಾ ತಿಳಿಯದೆ, ಬಾಲ್...
No comments:
Post a Comment