ಜೀವನ ಹತ್ತಿಯ ಹಾಸಿಗೆಯಲ್ಲ
ಎಂದಿಗೂ ಮೃದುವಾಗಿರಲೆಂದು ಬಾವಿಸಲು.
ಛಲದ ಟೊಂಕ ಕಟ್ಟಿ ನಿಂತರೆ ಮಾತ್ರ
ಪಥದ ಮಧ್ಯ ನಿಂತು ಮಾರ್ಗ ಹುಡುಕದಿರುವಿರಿ.
ಬದುಕಿನಲ್ಲಿ ಬವಣೆಗಳು ಇರುವುದೇ ಸಹಜ
ಮೆಟ್ಟಿನಿಂತು ಹೋರಾಟ ಮಾಡುವುದೇ ಮನುಜ.
ಅದರಲ್ಲಿ ನೀವು ಓಬ್ಬರಾದರೆ ಬದುಕು
ನಿಮ್ಮೊಡನೆಯೇ ಕೂತು ಸವಿಯಲು ಆಸ್ಪದ.
ದಾಟದಿರಿ ಎಲ್ಲೆಯನ್ನು ಮೀರಿ
ಪ್ರೀತಿಸಿ ನಮ್ಮ ನಡುವಿನಲ್ಲಿ ಇರುವವರನ್ನು.
ಬೆಟ್ಟು ಮಾಡಿ ತೋರಿಸುವವರ ನಡುವೆ
ಆದರ್ಶದ ಬೊಟ್ಟು ನೀವಾಗಿರಿ.
ಚಿಂತನೆಯ ಶಿಖರವನೆರಲು
ಸಾಧನೆಯು ಪರಿಶ್ರಮದ ಫಲಶ್ರುತಿ.
ಸ್ಪಂದಿಸಿ ನೋವುಂಡ ಜೀವಗಳಿಗೆ
ಕೈ ಹಿಡಿಯುವುದು ನಿಮ್ಮನ್ನು ಒಂದೊಮ್ಮೆಗೆ.
ಕನಸು ಕಟ್ಟಿ ಹೊರ ಚಿಮ್ಮಿಸದೆ ಕೂರದಿರಿ,
ಹೊರ ಬಂದು ಸೂರ್ಯನ ಕಿರಣದೊಂದಿಗೆ
ಸೇರಿ ಬಣ್ಣಗಳನ್ನು ತುಂಬಿಸಿ ಕೊಂಡು ಪ್ರಜ್ವಲಿಸಿರಿ.
ಕಾಮನ ಬಿಲ್ಲಾಗಿರಿ ಆದರ್ಶ ಪ್ರಜೆಯಾಗಿರಿ.
No comments:
Post a Comment