Wednesday, 21 August 2019
Tuesday, 20 August 2019
ಭತ್ತದ ಬದುಕು ಸಾದ್ಯವಿಲ್ಲ
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ಜೀವನ ಸ್ವಲ್ಪ ಸಮಯದ ಹಿಂದೆ ಉತ್ತಮವಾಗಿತ್ತು ಆದ್ರೆ ಈಗ ಅವರ ಪರಿಸ್ಥಿತಿಯು ಹದಗೆಟ್ಟಿದೆ ಆದ್ರೆ ಭತ್ತ ಬೆಳೆಯುವವರಿಗಿಂತ ಏನು ಹದಗೆಟ್ಟಿಲ್ಲ. ನಾವೆಲ್ಲ ನೋಡಿದ್ದೇವೆ ರಸ್ತೆ ಬದಿಯ ಗದ್ದೆಗಳು ನಿವೇಶಗಳು ಶಾಪಿಂಗ್ ಮಾಲ್ ಗಳು ಆದ್ರೆ , ಇನ್ನು ಮಕ್ಕಿ ಗದ್ದೆಗಳು ತೋಟಗಳು , ನೀಲಗಿರಿ ಅಕೇಶಿಯ ಪ್ಲಾಂಟೇಶನ್ ಗಳಾಗಿ ಬದಲಾಗುತ್ತಿವೆ.ಹಾಗದರೆ ಭತ್ತ ಬೆಳೆಯುವವರು ಹಿಂದೇಟು ಹಾಕಲು ಗದ್ದೆಗಳನ್ನ ಹಾಳು ಬಿಡಲು ಕಾರಣವನ್ನು ಹುಡುಕುತ್ತ ಹೊರಟರೆ ಸಿಗುವ ಕಾರಣಗಳು ಹಲಾವಾರು ಆದರೆ ಅವೆಲ್ಲ ಕಾರಣಗಳಲ್ಲಿ ಉಳಿದಿರುವ ಒಂದೇ ಸತ್ಯ ಲಾಭವೇ ಇಲ್ಲ , ಮೂರು ಹೊತ್ತು ಉಣ್ಣಲು ಭತ್ತ ಮನೆಯ ಕಣಜದಲ್ಲಿ ಇರುತ್ತದೆ ಹೊರತು ಬೇರೇನೂ ಲಾಭವೂ ಇಲ್ಲ..
ಭತ್ತ ಬೆಳೆಯುವ ರೈತರು ಇಂದು ಶ್ರೀಮಂತರಾಗಿ ಉಳಿದಿಲ್ಲ , ಇಂದು ಭತ್ತ ಬೆಳೆಯುವ ರೈತರು ಅದರಲ್ಲೂ ಮಲೆನಾಡಿನ ಭಾಗದಲ್ಲಿ ಬಡವರು ಮಾತ್ರ, ಯಾರಿಗೆ ಹೊಳೆಯಿಂದ ನೀರು ತರುವ ಶಕ್ತಿಇಲ್ಲವೋ , ಯಾರಿಗೆ ಬೋರ್ವೆಲ್ ಹೊಡೆಸಿ ನೀರು ತಂದು ತೋಟ ಮಾಡುವ ಶಕ್ತಿ ಇಲ್ಲವೋ ಇಂತವರು ಇನ್ನು ಗದ್ದೆಯನ್ನು ಇಟ್ಟುಕೊಂಡಿದ್ದರೋ ಹೊರತು , ಆರ್ಥಿಕವಾಗಿ ಸದೃಢ ಇದ್ದವರು ಕಾಡು ಗದ್ದೆ ಸಾಯಲಿ ಕಾಡು ಗುಡ್ಡವನ್ನು ಒಳ ಹಾಕಿ ತೋಟ ಮಾಡಿದ್ದಾರೆ. ಭತ್ತ ಬೆಳೆಯುವವರ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದರೆ ನಾನು ಹೇಳುವ ಬದಲು ನೀವೇ ಮುಂದೆ ಈ ಲೇಖನ ಓದಿದರೆ ಮನಸಲ್ಲಿ ಹೀಗೊಂದು ಯೋಚನೆ ಬರದೆ ಇರದು ಕೂಲಿ ಮಾಡಿದರೆ ಉತ್ತಮ ಜೀವನವಿದೆ ಎಂದು.
ಗದ್ದೆ ಹೊಳ್ಕೆ ಗೆ ಟ್ರಾಕ್ಟರ್ಗೆ - 3000 ಸಾವಿರ.
25 quintal * 1200 = 32500
- 43850
ಗದ್ದೆ ಭತ್ತದ ಕೃಷಿ ಮಾಡಿ ಸದೃಢ ಜೀವನ ಮಾಡಲಿಕ್ಕಂತೂ ಸಾಧ್ಯವಿಲ್ಲ.. ದಿನಕ್ಕೆ ಹತ್ತು ರೂಪಾಯಿ ಅಂದ್ರೆ ಭಿಕ್ಷುಕನಿಗಿಂತಲು ಸಣ್ಣ ಮಟ್ಟದ ಜೀವನ.. ಆದ್ದರಿಂದಲೇ ಇಂದು ಸಾಕಷ್ಟು ಭತ್ತ ಬೆಳೆಗಾರರು ಕೂಲಿಯನ್ನ ಅವಲಂಬಿಸಿದ್ದಾರೆ.. ಇಲ್ಲ ಅಂದ್ರೆ ಹೇಗೆ ಬದುಕಬೇಕು ಹೇಳಿ ವಿದ್ಯಾಭ್ಯಾಸ , ಸಂತೆ ಸಾಮಾನು ಇನ್ನು ಹಲವಾರಕ್ಕೆ ಕೂಲಿಯೇ ಆಧಾರ..
Wednesday, 15 May 2019
ಮಲೆನಾಡು ಅಂದರೆ ಒಮ್ಮೆಲೇ ಕಣ್ಣು ಮುಂದೆ ಕಂಪಿಸೋದು ಮಳೆ ಹಸಿರಿನ ದಟ್ಟ ಕಾಡುಗಳು ವಿಪರೀತವಾದಂತಹ ಮಳೆ ಅಷ್ಟೇನಾ ಮಲೆನಾಡು ಅಲ್ಲವೇ ಅಲ್ಲ ವಿವಿಧ ಸಂಸ್ಕೃತಿ ಆಚರಣೆಗಳು ಹೊಸ್ತಿನ ಮನೆ ,ದಯ್ದರ್ಕ್ಕೆ . ಮಾಲಾಯ, ಇಂತಹ ಎಷ್ಟೋ ಆಚರಣೆಗಳು ಸಹ ಇವೆ.ಹೇಳಿದ್ದೆ ಎಷ್ಟು ಬಾರಿ ಹೇಳೋದು ಮಾದ್ಯಮಗಳಂತೂ ಮಲೆನಾಡನ್ನು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ನೆಲವೆಂದು ಬಣ್ಣಿಸುವರು. ಇಂತಹ ಮಲೆನಾಡಲ್ಲಿ ಇಂದು ಭತ್ತದ ಗದ್ದೆಗಳೆಲ್ಲ ದುರ್ಭಿನು ಹಾಕಿ ಹುಡುಕುವ ಹಂತಕ್ಕೆ ಬಂದು ತಲುಪಿವೆ. ರಸ್ತೆಗಳಿಗೆ ಹತ್ತಿರವಾಗಿ ಇದ್ದ ಗದ್ದೆಗಳು layout ಗಳಾಗಿ ನಿವೇಷನಗಳಾಗಿ ಬದಲಾವಣೆಯಾಗಿ ವಾಣಿಜ್ಯ ಉದ್ದೇಶಗಳಿಗೆ ಮಾರ್ಪಾಡದರೆ, ಗದ್ದೆಗಳು ನೀಲಗಿರಿ , ಅಕೇಶಿಯ, ಅಡಿಕೆ ತೋಟಗಳಾಗಿ ರೂಪುಗೊಂಡಿವೆ.ಇನ್ನೂ ಉಳಿದ ಗದ್ದೆಗಳಲ್ಲಿ ಭತ್ತ ನಾಟಿ ಇದ್ದರು ಹಿಂದಿದ್ದ ಕಳೆ ಖುಷಿ ಇಲ್ಲ, ಗಾಜನೂರು ಆಳುಗಳೊ , ಇನ್ನಿತರ ನವನವೀನ ಯಂತ್ರೋಪಕರಣಗಳ ಸಹಾಯದಿಂದ ಒಂದೋ ಎರಡೋ ದಿನಕ್ಕೆ ಗದ್ದೆ ನಟ್ಟಿ ಮುಗಿದು ಜನ ಮನೆ ಸೇರುತ್ತಾರೆ.
ಆದ್ರೆ ಮೊದಲು ಹೀಗಿರಲಿಲ್ಲ , ಗದ್ದೆ ನಟ್ಟಿಯ ಮೊದಲ ಹಂತ ಶುರು ಆಗ್ತಿದ್ದಿದ್ದು ಜೂನ್ ಶುರುವಿನಲ್ಲಿ ಮೊದಲ ಮುಂಗಾರು ಸಿಂಚನವಾದಗ ಗದ್ದೆ ಹೊಳ್ಕೆ ಶುರು ಆಗುತಿತ್ತು( ಹೋಳ್ಕೆ ಮೊದಲ ಹಂತದ ಉಳುಮೆ) ಮಾಡಿ ಸಸಿ ಹಾಕಲು ರೆಡಿ ಆಗುತ್ತಿದ್ದರು , ಜೂನ್ ಹದಿನೈದು ಹದಿನಾರಕ್ಕೆ ಗದ್ದೆಯಲ್ಲಿ ನೀರಾಗಿ ಸಸಿ ಹಾಕಲು ಯೋಗ್ಯವಾಗಿರುವಂತೆ ಭೂಮಿ ಮಾರ್ಪಾಡಗಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಮಲೆನಾಡಿನ ರೈತರು ಮೈಯಳಿಗೆ ಕೆಲಸಕ್ಕೆ ಹೋಗುವುದರ ಮೂಲಕ ಗದ್ದೆ ನಾಟಿಯ ಕೆಲಸವನ್ನು ಆರಂಭಿಸುತ್ತಿದ್ದರು.. ಮೊದಲು ಹಳ್ಳದಲ್ಲಿ ಗೋಣಿಚೀಲದಲ್ಲಿ ಒಳ್ಳೆಯ ಐಟಿ , ಜೋಳಗ , ಹೆಗ್ಗೆ ಮೊಳಕೆಯ ಭತ್ತಗಳನ್ನು ಕಟ್ಟಿ ಹಳ್ಳದಲ್ಲಿ ನೆನೆಹಾಕಿರುತ್ತಿದ್ದರು. ನಂತರ ಎತ್ತಿನ ಜೋಡಿಗೆ ಹೇಳಿ ಅಗಡಿ ರೆಡಿ ಮಾಡುತ್ತಿದ್ದರು , ಅಗಡಿಯಲ್ಲಿ ನಳ್ಳಿ ಯಿಂದ ಸಮತ್ತಟ್ಟ ಮಾಡಿ ಭತ್ತ ಬಿತ್ತನೆ ಮಾಡುತ್ತಿದ್ದರು , ಭತ್ತದ ಸಸಿ ನಾಟಿ ಮಾಡಲು ಯೋಗ್ಯವಾದಗ ನಾಟಿ ಕಾರ್ಯ ಶುರು ಮಾಡುತಿದ್ದರು.
ಮಲೆನಾಡಲ್ಲಿ ನಾಟಿ ಕಾರ್ಯ ಶುರುವಾದರೆ ಒಂಥರ ಹಬ್ಬದ ವಾತರವರಣವೇ ಸರಿ ಊರವರೆಲ್ಲ ಸೇರಿ ಗುಂಪಾಗಿ ಮೈಯಳಿಗೆ ಬ್ಯಾಚ್ ಮಾಡಿ ಗೋರಬು ಹೊತ್ತು ಹೆಂಗಸರು ಹರಟೆ ಹೊಡೆಯುತ್ತ ಮುದುಕಿಯರು ಎಲೇ ಅಡಕೆ ಸುಣ್ಣದ ಡಬ್ಬಿ ಒಂಚೂರು ತಂಬಾಕು ಹಿಡಿದು ಗಂಡಸರು ಹಾರೆ ಬುಟ್ಟಿ ಹಿಡಿದು ಗದ್ದೆಗೆ ಇಳಿಯುವರು
ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ
ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...

-
ದಟ್ಟ ಕಾಡು ,ಮನೆ ಮುಂದೆ ಜಮೀನು ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ ಸುಟ್ಟು ಕರಿ ಉಂ...
-
ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿ...
-
ನೆನಪಿನ ಮನೆಯಲಿ ಒಂದು ಕೋಣೆ ತೆಗಿದಿದೆ. ನನ್ನ ಕರೆದಿದೆ,ಬಾಲ್ಯವ ತೆರೆದು ಕಣ್ಣಿಗೆ ಮುಸುಕು ಬಂದಿದೆ. ಮರೆತ ಮನವು ನೆನಪುಗಳೊಡನೆ ಸಾಗಿದೆ. ನಾ ತಿಳಿಯದೆ, ಬಾಲ್...