Saturday 9 December 2017

ಗೊತ್ತಿರೋ ಸತ್ಯ

ಮಲೆನಾಡು ಅಂದ್ರೆ ನೆನಪಾಗೋದು ಚಿಕ್ಕಮಗಳೂರು ಶಿವಮೊಗ್ಗ. ಆ ಶೃಂಗೇರಿ ಹೊಸನಗರ ತೀರ್ಥಹಳ್ಳಿ  ಊರಿಗೆ ನಿಸರ್ಗವೇ ಸೀರೆಯಾಗಿ ಹೊದ್ದುಕೊಂಡು  ನಿಂತಿರುವಂತೆ ಭಾಸವಾಗುತ್ತದೆ ಸಾಮಾನ್ಯವಾಗಿ .ಮಲೆನಾಡಿನಲ್ಲಿ  ವೈವಿಧ್ಯಮಯ ಪಕ್ಷಿ ಸಂಕುಲ ಪ್ರಾಣಿಸಂಕುಲಗಳಿಗೆ ಆಶ್ರಯ ತಾಣವಾಗಿದೆ ಅದೆಲ್ಲಾನೂ ಬಿಟ್ಟು ಮತ್ತೊಂದಿದೆ ಗಿಡಮೂಲಿಕೆಗಳ ತಾಣವು ಹೌದು.ಇಂದು ಆ ಗಿಡಮೂಲಿಕೆಯ ಗಿಡಗಳು ಕಾಲು ಬುಡದಲ್ಲಿದ್ದರು ಅದನ್ನ ತಿಳಿಯಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಲ್ಲಾದಕ್ಕೂ ಕಾರಣ ನಮ್ಮಲ್ಲಿಲ್ಲವಾದ ಆಸಕ್ತಿ ಮತ್ತು ಇಂಗ್ಲೀಷ್ ಮೆಡಿಸಿನ್ ನ ಅಗಾಧವಾದ ಪ್ರಭಾವ ಇಷ್ಟೇ ಅನ್ಕೋಬೇಡಿ ಇನ್ನೂ ಒಂದು ಪ್ರಮುಖವಾದ ಸಂಗತಿ ಇದೆ ಅದೇನೆಂದರೆ ಮೂಢನಂಬಿಕೆ ಅಂತ ಹೇಳಬೇಕೋ ಅಜ್ಞಾನವೋ ತಿಳಿಯುತ್ತಿಲ್ಲ ಅದು ನಿಮಗೆ ಬಿಟ್ಟಿದ್ದು ಓದುಗರೇ ಊಹಿಸಿಕೊಳ್ಳಿ.ಈ ಮೂಢನಂಬಿಕೆ ಅಂತಾ ಹೇಳಿ ಸುಮ್ಮನೆ ಕೂತರೆ ಹೇಗೆ ಅದರ ಬಗ್ಗೆ ವಿವರಣೆ ಹೀಗಿದೇ ಹಿಂದೆ ಮತ್ತು ಈಗಲೂ ಸಹ ಕೆಲವೆಡೆ ಗಿಡಮೂಲಿಕೆ ಪದ್ದತಿ ಇದ್ದರು ಸಹ ಹಲವೆಡೆ ನಶಿಸಿ ಹೋಗಿದೆ ಹಿಂದೆ ನಮ್ಮ ಸುತ್ತಮುತ್ತಲಿನಲ್ಲೆ ಮಕ್ಕಳಿಗೆ ಕಫಾ ಗೆ ಔಷದಿ ಕೊಡುವವರು,ಕಣ್ಣಿನ ಹೂವಿಗೆ ಔಷದಿ ಕೊಡುವವರು , ಇನ್ನೂ  ಇತರೇ ಔಷದಿ ಕೊಡುವವರು ಇದ್ದರು ಅವರೆಲ್ಲರೂ ಸಹ ಗಿಡಮೂಲಿಕೆಗೆ ಬಳಸುವುದು ಏನೆಂದು ಇನ್ನೊಬ್ಬರಿಗೆ ಹೇಳದೆ ಇದ್ದುದು ಇಂದು  ಗಿಡಮೂಲಿಕೆ ನಶಿಸಲಿಕ್ಕೆ ಬಹಳ ಮುಖ್ಯ ಕಾರಣ.ಔಷದಿ ಮಾಡುವವರು ಯಾವ ಯಾವ ಗಿಡಮೂಲಿಕೆ ಸಸ್ಯಗಳನ್ನು ಬಳಸುತ್ತೇವೆ ಎಂದು ಹೇಳಿದರೆ ಗಿಡಮೂಲಿಕೆಯ ಪ್ರಭಾವ ಫಲಾನುಭವಿಗಳಿಗೆ ಆಗುವುದಿಲ್ಲ ಎಂಬಾ ನಂಬಿಕೆ.ಇಂದು ಎಷ್ಟೋ ಕಾಯಿಲೆಗಳಿಗೆ ಆಂಗ್ಲ ಮೆಡಿಸಿನ್ ಬಂದಾಗಿಯೂ ಸಹ ಬಾರಿ ಡಿಮ್ಯಾಂಡ್ ಇರೋದು ಮಕ್ಕಳ ಕಫ ತೆಗಿಯುವ ವಿಧಾನದ ಗಿಡಮೂಲಿಕೆಗೆ, ಆ ಗಿಡಮೂಲಿಕೆ ಹೇಗೆಂದು ನಿಮ್ಮ ಮುಂದೇ ವಿವರಿಸೋಣ ಎಂದರೆ ಗಿಡಮೂಲಿಕೆ ಮಾಡುವವರು ನಮಗೂ ಹೇಳಬೇಕಲ್ಲ. 
      ಹೀಗೆ ಒಂದಿನ ದಾರಿಯಲ್ಲಿ ನಡ್ಕೊಂಡು ಹೋಗ್ಬೇಕಾದ್ರೆ  ಗಿಡದ ಪೊದೆಯೊಳಗೆ  ಏನೋ ಶಬ್ದ ಹೋಗಿ ನೋಡಿದೆ ಒಬ್ಬರೇ ಇದ್ದರು ಏನೋ ಬಳ್ಳಿಯ ಬೇರನ್ನು  ಅಗೆದು ಕೀಳುತ್ತಿದ್ದರು ಹತ್ತಿರ ಹೋಗೋದಕ್ಕೂ ಬಿಡದೆ ಬೇರೆಯೇ ಮಾತನಾಡಿ ಕಳಿಸಿಬಿಟ್ಟಿದ್ದರು. ಹೀಗೆ ಆಯುರ್ವೇದ ಮಾಡುವವರು ಯಾರಿಗಾದರೂ ಮೂಲಿಕೆಕೊಡುವಾಗ ಯಾರ ಬಳಿಯೂ ಮಾತಾನಡುವುದಿಲ್ಲ ಯಾರಿಗೂ ಏನು ಬಳಕೆ ಮಾಡಿದ್ದೇವೆ ಎಂದು ಕಿಂಚಿತ್ತೂ ಮಾಹಿತಿಯನ್ನು ನೀಡದೆ ಭಾರತದ ಅತ್ಯಮೂಲ್ಯ ಪದ್ದತಿಯನ್ನು ಉಸಿರು ನಿಲ್ಲುವುದರೊಂದಿಗೆ  ತಮ್ಮೊಡನೆ ಕರೆದೊಯ್ಯುವರು.

Thursday 7 December 2017

ರೈತ


ರೈತ ಏನಾಂದರು ಅವ ನಮ್ಮ ಅನ್ನಾಧಾತ.
ಹಸಿದವರ ಒಡಲುಣಿಸುವ ಜೀವಧಾತ.
ಜಗತ್ತನ್ನು ಬೆಳಗುವ ಸೌಖ್ಯಪ್ರಧಾತ.

ವರ್ಷಧಾರೆಯಲಿ ಮೈಯೊಡ್ಡಿ ನಿಂತರು,
ಕಷ್ಟದ ಬೆವರು ತೀರದ ರೈತ.
ಜೀವನದ ಪರಿಪಾಠ ಅರಿಯದೆ,
ಪ್ರಕೃತಿಯ ಮಡಿಲಲ್ಲಿ  ಬದುಕುವ ರೈತ.
ಎದೆಯೊಡೆದರು ಛಲ ಬಿಡದೆ ಬಾಳುವ ರೈತ.
ಅವನಿರದೆ ಈ ಭೂಮಿ ನಡುವುದು ಖಚಿತ.
ಸಿರಿವಂತರ ಗುಲಾಮ ರೈತ,ದೇಶದ ಸೂತ್ರಧಾರ ರೈತ.
ನಮಗಿಂದು ಅವ ಬರೀ ಅನ್ನಧಾತ.

ಅರಿಯಬೇಕಿದೆ ಅವನ ಮನದ ಮಿಡಿತ.
ಕೈಯ ಹಿಡಿದು ಸಾಗೋಣ ನಗುನಗುತ.
ಏನಾದರೂ ಅವ ಅನ್ನಧಾತ.
ಜಗತ್ತನ್ನು ಬೆಳಗುವ ಸೌಖ್ಯಪ್ರಾಧಾತ.

1970 ರಲ್ಲಿ ಹೀಗಿತ್ತಂತೆ ಮಲೆನಾಡು

ದಟ್ಟ ಕಾಡು ,ಮನೆ ಮುಂದೆ ಜಮೀನು  ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ  ಸುಟ್ಟು ಕರಿ ಉಂಡೆ ಮಾಡಿಕೊಂಡು  ಬಳೆದಿದ್ದ ಕರಿನೆಲ. ಕರಿನೆಲದಮೇಲೆ ಓಡಾಡಿ ಪಾದ ಮೈಕೈ ಕಪ್ಪಾಗಿರುತ್ತಿದ್ದವು.ಅಂತೆಯೇ ಮನೆಯೇ ಆಚೆ ಈಚೆಯೆ ಕೋವಿ ಹಿಡಿದು ಹೋದರೆ ಬರುವಾಗ ಕೈಯಲ್ಲಿ ಮೊಲ ಹೊಡೆದು ತರುತ್ತಿದ್ದದ್ದು, ಮನೆಯ ತುಂಬಾ ಮಕ್ಕಳು ಅಜ್ಜಿಯ ಆರೈಕೆ, ಅಂದು ಸಂಜೆ ಆರು ಗಂಟೆಯ ಒಳಗೆ ಊಟ ಮಾಡಿ ಬಡಿಸಿ ಮಲಗಿಸಿರುತ್ತಿದ್ದರು ಮಕ್ಕಳನ್ನ ಕಾರಣ ಆ ಹಿಂದೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ ಹಾಗೆಯೇ ಬೆಂಕಿ ಪೊಟ್ಟಣ ದ ಒಂದು ಕಡ್ಡಿಯನ್ನ ಉರಿಸಿಲಿಕ್ಕೋ ಬಡತನ ಆದ್ದರಿಂದ ಸಂಜೆಯ ಸಮಯಕ್ಕೆ ಸರಿಯಾಗಿ ದೊಡ್ಡ ಮರದ ತುಂಡನ್ನು ಒಲೆಗೆ ಹಾಕಿ ಮಲಗುತ್ತಿದ್ದರು ಯಾಕಂದರೆ ಬೆಳಗ್ಗೆ ಅದನ್ನ ಉರಿಸಿ ಬೆಂಕಿ ಮಾಡಲು.
ಆ ಕಾಲದಲ್ಲಿ  ಹಸಿ ಏಡಿಯ ಕಡೆದು ಸಾಂಬರ್ ಮಾಡುವುದೇ ಒಂದು ವಿಶೇಷ ಮತ್ತು ಹಾಗೆಯೇ ಚಗಳಿ ಇರುವೆಯ ಚಟ್ನಿ  ಮಲೆನಾಡಿನಲ್ಲಿ  ಅಂದು ಮಾಡ್ತಾ ಇದ್ದರಂತೆ . ಹಾಗೆಯೇ ಗೇಣಿಗೆ ಗದ್ದೆಗಳನ್ನು ಮಾಡುತ್ತ ತಿಂಗಳುಗಟ್ಟಲೆ ಗದ್ದೆನೆಡುವುದು ತಿಂಗಳುಗಟ್ಟಲೆ ಗದ್ದೆ ಕೊಯ್ಯುವುದು ಭತ್ತ ಕುಟ್ಟುವುದೇ ಕೆಲಸ ವರ್ಷಪ್ರತಿ ಎಲ್ಲರಿಗೂ.ಅದರ ಮದ್ಯೆ  ಕಬ್ಬಿನ ಕೋಪ್ಪುರಿಗೆ ತೊಳೆದ ನೀರಿನ ಸಾರಾಯಿ ಮನೆಯಲ್ಲಿ ಮಾಡಿಟ್ಟಿರುತ್ತಿದ್ದರು.ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಹುಲಿಭತ್ತ ಹೇರಕುವುದೇ ಕೆಲಸ, ಹುಲಿಭತ್ತ ಹೇರಕಿದ ದುಡ್ಡಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನಡೆದುಕೊಂಡು ಹೋಗುವುದು ಮತ್ತು ವರ್ಷಕ್ಕೊಮ್ಮೆ ಜಾತ್ರೆಯಲ್ಲಿ  talkis ನಲ್ಲಿ ಫಿಲ್ಮ್ ನೋಡಿದರೇನೋ ಖುಷಿ.ಗೌರಿ ಹಬ್ಬದ ಸಮಯದಲ್ಲಿ ಮೀನು ಇಳಿದು ಹೋಗೋ ಸಂದರ್ಭದಲ್ಲಿ ಹಿಡಿದ ಮೀನುಗಳನ್ನ ಬಿಸಿಲುಕಣೆ ಮೇಲೆ ಹಾಕಿ ಒಣಗಿಸಿ ಶೇಕರಿಸಿಟ್ಟುಕೊಳ್ಳೋದು ನಡೀತಿತ್ತು. ಬೇಕಾದಾಗ ಅದನ್ನ ಬಳಸಿಕೊಳ್ಳೋತ್ತಿದ್ದರು ಅದಕ್ಕೆ ಡಿಮ್ಯಾಂಡೋ ಡಿಮ್ಯಾಂಡ್ ನೆರೆಮನೆಯವರೆಲ್ಲ ನಮಗೂ ಸ್ವಲ್ಪ ಕರಿಮೀನು ಕೊಡಿ ಅಂತ ಬಂದು ನಿಂತಿರುತ್ತಿದ್ದರು.ಭತ್ತ ಕುಟ್ಟಿ ಆದ ನಂತರ ಭತ್ತದ ಮೊಳಕೆ ಕಟ್ಟಿ ಮನೆಮನೆಯಲ್ಲೂ  ಹೆಂಡದ ಗಮ್ ಅನ್ನುವ ವಾಸನೆ ಮೂಗಿಗೆ ಬಡಿಯುವುದು ಪ್ರತಿ ಮನೆಯಲ್ಲೂ  ಸಾಮಾನ್ಯವೆ ಸರಿ.ಮದುವೆಮನೆ ಅಥವಾ ಯಾವುದೇ ಸಮಾರಂಭಗಳಲ್ಲಿ ಚೀನಿ ಕಾಯಿಯ ಪಲ್ಯ ಮಾಡಿದರೆ ಹೆಚ್ಚು ಮತ್ತು ನೆಂಟರು ಬಂದಾಗ ಆಲೂಗೆಡ್ಡೆ ಪಲ್ಯ ಮಾಡಿದರೆ ಬಂದ ನೆಂಟರಿಗೆ ಇಂದು ಚಿಕನ್ ಮಟನ್ ಮಾಡಿದಷ್ಟು ಸಂತಸ.ದನ ಮೆಯಿಸೋದು ದನ ಸಂಜೆ ಸಮಯಕ್ಕೆ ಮನೆಗೆ ಹೊಡೆದುಕೊಂಡು ಬರುವಾಗ ಸುಮ್ಮನೆ ಬರುತ್ತಿರಲಿಲ್ಲ ಬೆತ್ತದ ಬುಟ್ಟಿ ಗಳನ್ನ ಮಾಡಿ ದನದ ಜೊತೆ ಮನೆಗೆ ಬರುತ್ತಿದ್ದರು.ಕಡುಬಡತನವಿದ್ದರು ಇತರರ ಮನೆಗೆ ಕೆಲಸಕ್ಕೆ ಹೋಗುವವರು ಕಡಿಮೆಯೇ ಇದ್ದರು ಅವರವ ಮನೆಗೆ ಏನು ಬೇಕೋ ಅದನ್ನ ಬೆಳೆದುಕೊಳ್ಳುವಲ್ಲಿ ಸ್ವಾವಲಂಬನೆ ಹೊಂದಿದ್ದರು .ಆ ಸಮಯದಲ್ಲಿ ದುಡ್ಡಿನ ಅವಶ್ಯಕತೆ  ಬರುತ್ತಿದ್ದದ್ದೇ ಕಡಿಮೆ ಆಗಿರುತ್ತಿತ್ತು.ಎಷ್ಟೋ ದಿನ ಹೊಸಾಳೆ ಯಲ್ಲೆ ಕಾಲ ಕಳೆಯುತ್ತಿದ್ದರು. ಹೊಸಾಳೆ ಅಂದರೆ ಖಾರ ಕಡೆದು ಕೊನೆಯಲ್ಲಿ ಖರಾದ ಕಲ್ಲಿನಲ್ಲಿ ಉಳಿದ ಖರಕ್ಕೆ ಉಪ್ಪು ಹುಳಿ ಸೇರಿಸಿ ಬಳಸುವುದು.
ಅಂಗಡಿಗೆ ಸೋಪು ಶಾಂಪು ಅಂತ ಒಂದಿನ ತೆರಳಿದ್ದು ಸಹ ಇಲ್ಲ ಶೀಗೆ ಕಾಯಿ,ಅಂಟೋಲ ಕಾಯಿಯೇ ಮೈ ಸ್ವಚ್ಛಗೊಳಿಸುವ ಸಾಬೂನುಗಳಾಗಿದ್ದವು.ನಾವಿಂದು ಖರ್ಚು ವೆಚ್ಚಕ್ಕೆ ತಲೆ ಕೆಡಿಸಿಕೊಳ್ಳದೆ ದುಂದು ವೆಚ್ಚ ಮಾಡುತ್ತೇವೆ ಆದರೆ ಹಿಂದಿನವರು ಬಸ್ಸಿನಲ್ಲಿ ಕಂಡಕ್ಟರ್ ಒಂದು ರೂಪಾಯಿ ಚಿಲ್ಲರೆ ಕೊಡದಿದ್ರು  ಜಗಳಕ್ಕೆ ನಿಂತಿರುತ್ತಾರೆ ಕಾರಣ ಇವೆಲ್ಲ ಕಷ್ಟ ಜೀವನದಲ್ಲಿ ಅನುಭವಗಳನ್ನ ಎದುರಿಸಿ ಬಂದಿರುತ್ತಾರೆ.1970 ಯಲ್ಲಿ ಹಣವಿರಲಿಲ್ಲ ಕಾಯಿಲೆ ಇರಲಿಲ್ಲ  ಹಸಿವಿತ್ತು ಆದರೆ ನೆಮ್ಮದಿ ಸಂತೋಷಕ್ಕೆನು ಬರವಿರಲಿಲ್ಲ.

Wednesday 6 December 2017

ಮಳೆಗಾಲದಲ್ಲಿ ತೀರ್ಥಹಳ್ಳಿ

ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿಸುವ ಸಮಯವದು. ಗಿಡಮರಗಳು ಸತತ ಬೇಸಿಗೆಯಿಂದ ಬಳಲಿ ಮಳೆಯ ಸಿಂಚನಕ್ಕೆ ನಿಟ್ಟುಸಿರು ಬಿಟ್ಟು ಹಚ್ಚ ಹಸಿರಿನಿಂದ ಸ್ವಚ್ಛವಾಗಿ ಕಂಗೊಳಿಸುವ ಸಮಯದಲ್ಲಿ ನಾವು ಕಾಯ್ತಾ ಇರ್ತಾ ಇದ್ದೇವು ಗದ್ದೆಯಲ್ಲಿ ನೀರಾಯ್ತಾ ಅಂತ ಆ ಶಾಲಾ ದಿನಗಳಲ್ಲಿ  ಒಂದು ಮಳೆ ಬಂದರೆ ಹೋಗಿ ಗದ್ದೆಯನ್ನು ನೋಡಿಕೊಂಡು ಬರೋದೆ ನಮ್ಮ ಕೆಲಸ  ಎಷ್ಟೋ ಸಲ ಮಳೆಬರಲಿ ಎಂದು ಕಾದು ಕುಳಿತದ್ದು ಇದೆ ಮನೆಯಲ್ಲಿ ಹೊಸ ಒಳ್ಳೆಯ battery ತನ್ನಿ , ಇರುವ ಬ್ಯಾಟರಿ ಗೆ ಒಳ್ಳೆಯ shell ಹಾಕಿಸಿಡಿ ಎಂದು ಹೇಳುತ್ತಿದ್ದದ್ದು ನೆನಪಿದೆ, ಕಾರಣ ನಾನು ಮಳೆಬರಲಿ ಎಂದು ಕಾಯುತ್ತಿದ್ದದ್ದು  ಮಳೆಗಾಲದಲ್ಲಿ  ನದಿಯ ಸಂಧಿಸುವ ಹಳ್ಳ ತೊರೆಗಳ ಮೂಲಕ ಗದ್ದೆಗೆ   ಬರುತ್ತಿದ್ದ ಹತ್ತು ಮೀನು ಕಡಿಯುವ ಆಸಕ್ತಿಯಿಂದಷ್ಟೇ.ಮುಂಗಾರುಮಳೆ ಆರಂಭವಾಗಿ ಸಿಹಿ ನೀರು  ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರಿದಾಗ ಮೀನು ಗಳು ಗದ್ದೆಯಲ್ಲಿ ಮೊಟ್ಟೆ ಇಡಲು ಹಳ್ಳಗಳ ಮೂಲಕ ಬರುತ್ತಿದ್ದವು. ರಾತ್ರಿಯಾಯಿತು ಎಂದರೆ ತಲೆಗೆ ಬ್ಯಾಟರಿ ಕಟ್ಟಿ ಕೈಯ್ಲಲಿ ಒಂದು ಚೀಲ ಒಂದು ಕತ್ತಿ ಹಿಡಿದು ನೀರಿಗೆ ಬ್ಯಾಟರಿ ಬಿಡುತ್ತಾ ಮೀನುಗಳನ್ನು ಹುಡುಕುವ ಜನರಿಗೇನು ಬರವಿರಲಿಲ್ಲ ,ರಾತ್ರಿ ಗದ್ದೆಯಲ್ಲಿ ನೂರಾರು ನಕ್ಷತ್ರಗಳು   ಪಳ ಪಳ ಪ್ರಜ್ವಲಿಸೋ ತರ ಬ್ಯಾಟರಿ ಗಳು ಪ್ರಜ್ವಲಿಸುತಿರುತ್ತವೆ.ಎಲ್ಲರೂ ಹುಡುಕುವುದು ಮೀನುಗಳನ್ನ ಅದರ ಮದ್ಯೆ ಕಾರೇಡಿ ಹಿಡಿಯುವುದು ಕೂಡ ಮರೆಯುವಂತಿಲ್ಲ.  ಮೊದಲು ಹಳ್ಳಗಳಲ್ಲಿ ಬ್ಯಾಟರಿ ಹೊಳಪಿಸಿ ಕಾರೇಡಿಯನ್ನು ಹಿಡಿದು ನಂತರ ಗದ್ದೆಗೆ ಬಂದು ಮೀನು ಕಡಿಯುತ್ತಿದ್ದ್ವು.ಮಲೆನಾಡಿನಲ್ಲಿ ನಮ್ಮ ಗದ್ದೆಗಳಲ್ಲಿ ಗಿರ್ಲು, ತೊಳೆಮೀನು, ಕಲ್ಮುಗ್ಗು, ಮುರ್ಗುಂಡು, ಕದಿಯಲು ಜನ ಸಾಗರವೆ ಹರಿದು ಬರುತ್ತಿತ್ತು, ಎಲ್ಲರ ಗುರಿ ಒಂದೇ ಆಗಿರುತ್ತಿತ್ತು ಏನಾದರೂ ಹೇಗಾದರೂ ಮಾಡಿ ಮುರ್ಗುಂಡು ಕಡಿಬೇಕು ಈ ಸಲ ಅಂತ,ಹಾಗೆ ಮೀನು ಕಡಿಯುವುದು ರಾತ್ರಿಯ ಕೆಲಸ ಮಲೆನಾಡಿಗರಿಗಾದರೆ ಹಗಲಲ್ಲಿ ಮುಳುಗಡೆ ಬಳಿ ಸೊಳ್ಳೆ ಪರದೆಯನ್ನು ಹಿಡಿದು ನೀರಿನಲ್ಲಿ ಹಾರುವ ಮೀನಿಗೆ ಬಲೆ ಹಿಡಿದು ಕೂರುವ ಕೆಲಸ, ಇಷ್ಟೇ ಅಲ್ಲ ಮಳೆಗಾಲದಲ್ಲಿ ಮಾಲ್ನಡಿಗರ ಪ್ರತಿಯೊಬ್ಬರ ಮನೆಯಲ್ಲೂ ಕೇಸಿನ ಸೊಪ್ಪಿನ ಪಲ್ಯ, ಏಳಸು ಬಿದಿರಿನ ಚಿಗುರು ಅಂದರೆ ಕಳಲೇ ಪಲ್ಯ ಅದನ್ನ ಮೂರ್ನಾಲ್ಕು ದಿನ ನೀರಿನಲ್ಲಿ ನೆನೆಸಿ ಮಾಡುತ್ತಿದ್ದರು, ಎತ್ತಿಗೆ ಹುರುಳಿ ಬೇಯಿಸುತ್ತಿದ್ದರು ಅದರ ಸಾರದಿಂದ ಮಳೆಗಾಲ ಮುಗಿಯೊವರೆಗೂ ಹುರುಳಿಕಟ್ಟು ಸಾರು,ಹೀಗೆ  ಒಂದೇರಡು ಮಳೆ ಬಂದು ಒಂದು ಮದ್ಯೆ ಬಿಸಿಲು ಬಂತು ಅಂದರೆ ಎಲ್ಲೆಡೆ ಅಣಬೆಯದ್ದೇ ಪಾರುಪತ್ಯ ಯಾವ ಹಡ್ಡೆಯಲ್ಲಿ ನೋಡಿದರು ಹೆಂಗಸರು ಮಕ್ಕಳು ನಿಂತು ಅಣಬೆ ಎತ್ತುವುದಷ್ಟೇ ಕೆಲಸ,ಹೈಗಿನ್ ಅಣಬೆ, ದೂಪದ್ ಅಣಬೆ, ಹೆಗ್ಗಲ್ ಅಣಬೆ, ಚುಲ್ಲಣಬೆ, ಅಕ್ಕಿ ಅಣಬೆ,ಹುಲ್ಲು ಅಣಬೆ, ಪಟ್ಟಣದಿಂದ ಹಲ್ಲಿಯೆಡೆಗೆ ಅಣಬೆ ಕೀಳಲು ಬರುತ್ತಿದ್ದ ಜನರಿಗಂಟು ಕಮ್ಮಿಯೇ  ಇರಲಿಲ್ಲ.ಅಣಬೆಯ ಕಾಲ ಮುಗಿಯುತ್ತಿದ್ದಂತೆ  ಎಲ್ಲೋ ಮೂಲೆಯಲ್ಲಿದ್ದ ಕಂಬಳಿಯನ್ನ ಹೊರತೆಗೆದು ಒಲೆಯ ಮೇಲೆ ಬಿಸಿಲುಕಣೆ ಮಾಡಿ ಕಂಬಳಿಯನ್ನ ಹಾಕೊಂಡು ಹಾಳೆ ಕೊಟ್ಟೆ ತಲೆಗೇರಿಸಿ ಸಸಿ ಅಗಡಿ ಕಡೆ ಹೊರಟು ಹೋಳ್ಕೆ  ಹೊಡೆದು ಭತ್ತದ ಬೀಜ ನೆನೆಸಿ ಹೂಟಿ ಮಾಡಿ  ಸಸಿ ಹಾಕಿಯೇ ಬಿಡುತ್ತಿದ್ದರು,ನಂತರ ಒಂದು ತಿಂಗಳ ನಂತರ ನಟ್ಟಿ ಮಾಡಿ ಮುಗಿಸುತ್ತಿದ್ದರು ನಟ್ಟಿ ಎಂದರೆ ನೆನಪಾಗೋದು ಮಲೆನಾಡ ಹೆಂಗಸರು ಗೋರಬನ್ನ ಹಾಕೊಂಡು ಬರ್ತಾ ಇರೋದು.ಹಾಗೋ ಹೀಗೋ ಗಾಜನೂರು ಆಳೋ ಅಥವಾ ಊರಿನ ಜನರ ಸಹಾಯದಿಂದ ಗದ್ದೆ ನಟ್ಟಿ ಮುಗಿಸಿ ಮನೆಯಲ್ಲಿ ಬೆಚ್ಚಗೆ ಕುಳಿತು ಬಿಡುವುದೇ ಮಲೆನಾಡಿನ ಜನರ ಮಲೆನಾಡಿನ ಕಾಯಕ.ನಟ್ಟಿ ಕೆಲಸವೆಲ್ಲ ಮುಗಿದನಂತರ ಜನರು ಕಾಡಿನ ಕಡೆ ಮುಖ ಮಾಡಿ ಮುರುಗನಾ ಹುಳಿ ಕೊಯ್ದು ಒಣಿಸಿ ಮಾರಾಟ ಮಾಡುವ ಕಾಯಕಕ್ಕೆ ಇಳಿದು ಬಿಡುತ್ತಾರೆ.ಆಮೇಲೆ ಹಳ್ಳಗಳಲ್ಲಿ ಕೂಣಿ ಒಡ್ಡುವುದು ಮರೆಯದೆ ಮಾಡುತ್ತಿದ್ದ ಕೆಲಸವದು. ಆಶ್ಲೇಷ ಮಳೆಯಲ್ಲಿ ಯಮ ಚಳಿ ದನಕರುಗಳೀಗೆ ಯಮ ಕಿಂಕರರು ಕಾಯುತ್ತ ಕುಳಿತಿರುತ್ತಿದ್ದರು ಮಲೆನಾಡಿಗರಿಗೆ ಕರುಗಳನ್ನ ಉಳಿಸಿಕೊಳ್ಳಲು ಹೈರಾಣಗಿರುತ್ತಿದ್ದರು  ಮೃಗಶಿರ ಮಳೆಯಲ್ಲಿ ಸಸಿಹಾಕಿ ಆದ್ರೆ ,ದೊಡ್ಡುವರ್ಷ,ಸಣ್ಣವರ್ಷ,ಆಶ್ಲೇಷಾ ಮಳೆಯೊಳಗೇ ನಟ್ಟಿ ಕೆಲಸ ಮುಗಿದಿರುತ್ತಿತ್ತು.ಹೀಗೆ ಮಲೆನಾಡಿಗಾರು ಏಡಿ ಮೀನು ಸಾರು ಅಂತ ಬೇಸಿಗೆಯಲ್ಲಿ ಮಾಡಿದ್ದ ಅಡ್ಡುಳಿ ಸೀಸ ವನ್ನು ಕಾಲಿ ಮಾಡುತ್ತ ಗದ್ದೇಕೊಯ್ಲು ಆಡಿಕೆ ಕೊಯ್ಲುಗಾಗಿ ಚಳಿಗಾಲ ವನ್ನು ಬರಮಾಡಿಕೊಳ್ಳುವರು

Tuesday 5 December 2017

ಯವ್ವನ (10 to degree)

ಪ್ರಸಾದ್ ಮೊದಲನೇ ದಿನ ಕಾಲೇಜು ಮೆಟ್ಟಿಲು ಏರಿದವನಿಗೆ ಏನೋ ಒಂದು  ಉಲ್ಲಾಸ ಆಸಕ್ತಿ, ಚನ್ನಾಗಿ ಓದಿ ಕೊಂಡು ಮುಂದೆ ಬರಬೇಕು ಎಂದು ದೃಢ ಸಂಕಲ್ಪ ಮಾಡಿಕೊಂಡು ಮುಂದಿನ ಹೆಜ್ಜೆ ಇಟ್ಟು  ಮೂರ್ನಾಲ್ಕು ದಿನ ಕಾಲೇಜಿಗೆ ಹೋದ. ನಂತರದ ದಿನಗಳಲ್ಲೇ ಸಹಜವಾಗಿ ಕಾಲೇಜಿನಲ್ಲಿ ಒಂಟಿಯಾಗಿದ್ದ ಅವನಿಗೆ ಹೊಸ ಗೆಳೆಯರ ಸಂಪರ್ಕ ವಾಯಿತು ಅವರೆಲ್ಲರೂ ಸಹಜವಾಗಿಯೇ ನಗರ ಪ್ರದೇಶದಲ್ಲಿ ಓದಿದ್ದಂತಹ ವಿಧ್ಯಾರ್ಥಿಗಳು ಆದರೆ ನಮ್ಮ ಪ್ರಸಾದ್ ಗ್ರಾಮೀಣ ಪ್ರದೇಶದಲ್ಲಿ ಓದಿದ್ದಂತಹ ವಿದ್ಯಾರ್ಥಿ. ಕ್ರಮೇಣ ಪ್ರಸಾದ್ಗೆ ಅವರೊಂದಿಗೆ ಸಹಜವಾಗಿ ಗೆಳೆತನ ಬೆಳೆಯಿತು ಅವರೆಲ್ಲರೂ ಪಿಯುಸಿ ಗೆ ಬಂದಾಗಲೇ ಕೈಯಲ್ಲಿ  ಮೊಬೈಲ್ ಫೋನ್ ಗಳನ್ನು ಹಿಡಿದು ಬರುತ್ತಿದ್ದರು,ಗ್ರಾಮೀಣ ಭಾಗದಿಂದ ಬಂದ ಪ್ರಸಾದ್ ಮನೆಯಲ್ಲಿ ಕಾಡಿ ಬೇಡಿ ಹಟ ಮಾಡಿ ಅಪ್ಪ ಅಮ್ಮನ ಬಳಿ ಕಿರುಚಾಡಿ ಎರಚಾಡಿ ಒಂದು android ಮೊಬೈಲ್ ತನ್ನದಾಗಿಸಿಕೊಂಡ. ನಂತರ ಪ್ರಸಾದ್ ಗೆ  ಕಾಲೇಜಿನ ಸ್ನೇಹಿತರು facebook ನ ಬಳಸೋದಾಗಿ ತಿಳಿದು ಕೊಂಡು ಈತನು facebook ಖಾತೆ ತೆರದನು  ಆದರೆ ಬಳಕೆ ಬಾರದೆ posword ಮರೆತು account    ಹೋಗಿತ್ತು. ಆ ಸುಸಂದರ್ಭದಲ್ಲಿ ಪರಿಚಯವಾದವನೆ  ನೀರಜ್ ಈತ ಒಬ್ಬ ಮಹಾನ್ ಬುದ್ಧಿಜೀವಿಯಂತೆ ಗೋಚರವಾದ ಪ್ರಸಾದ್ ಗೆ, ಪ್ರಸಾದ್ ಹೆಚ್ಚು ಹೆಚ್ಚು ಸ್ನೇಹವನ್ನು ಬಯಸಿ ನೀರಜ್ ಬಳಿ ಸೇರಿದ ಅವರಿಬ್ಬರ ಸ್ನೇಹ ಅಗಾಧವಾಗಿ ಬೆಳೆದು ಒಂದು ದಿನ ನೀರಜ್ facebook ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ  ಹೊಸದದಾಂತಹ facebook ಖಾತೆಯನ್ನು ತೆರೆದು ಕೊಟ್ಟ.ಕೊನೆಗೆ facebook ಗೆ ಸೇರಿ ನಾಲ್ಕು ಐದು ದಿನಗಳಲ್ಲೇ facebook ನಲ್ಲಿ  ಅಧಿಪತ್ಯ ಸಾಧಿಸಿದ್ದ ಪ್ರಸಾದ್.. ಆಗೇನು ಚಿಕವಯಸ್ಸು ಪ್ರಸಾದ್ ಗೆಳೆಯ ನೀರಜ್ ಮತ್ತು  ಪ್ರಸಾದ್ ಗೆ facebook ನಲ್ಲಿ ಸಮರಕ್ಕೆ ಕಣ ಏರ್ಪಾಡಾಯಿತು ಕಾರಣ ಪ್ರಸಾದ್ ನೀರಾಜ್ ನ facebook ನಲ್ಲಿದ್ದ ಹುಡ್ಗಿಗೆ message ಮಾಡಿದ್ದ. ಇಬ್ಬರ ನಡುವೆ ಉತ್ತಮ ಸ್ನೇಹವಿದ್ದರು ಕೂಡ ಒಳಗೊಳಗೇ ಇಬ್ಬರು ಕತ್ತಿಮಸೆಯ ತೊಡಗಿದ್ದರು ಅವನಿಗೆ ಯಾರಾದ್ರೂ ಹುಡುಗಿ facebook ನಲ್ಲಿ ಫ್ರೆಂಡ್ ಅದರೆ ಆ ಹುಡುಗಿ ನೀರಜ್ ಗೂ ಫ್ರೆಂಡ್ ಇದ್ದರೆ ನೀರಜ್ ಪ್ರಸಾದ್ ಬಗ್ಗೆ ಇಲ್ಲ ಸಲ್ಲದ್ದು ಹೇಳಿ block ಮಾಡಿಸೋದ್ದು ಮಾಡತೊಡಗಿದ್ದ, ಹೀಗೆ ಮುಂದುವರೆದುಕೊಂಡು ಹೋಗತೊಡಗಿತ್ತು ಅವರಿಬ್ಬರ ಗೆಳೆತನ ಮತ್ತೆ ಇಬ್ಬರೂ ಸೆಡ್ಡು ತಟ್ಟಿ ಅತಿ ಹೆಚ್ಚು facebook ಫ್ರೆಂಡ್ ಗಳಿಕೆಯಲ್ಲಿ ಬಿದ್ದಿದ್ದರು ಆಗಿನ ಸಂದರ್ಭದಲ್ಲಿ facebook ನೀರಜ್ ನದ್ದು 20 30 ದಿನ ಬ್ಲಾಕ್ ಆದದ್ದು ಉಂಟು ಆಗಿನ ಸಂದರ್ಭದಲ್ಲಿ ಅತಿ ಹೆಚ್ಚು facebook request ಕಲಿಸುತ್ತಿದ್ದರೆ block ಆಗುತ್ತಿತ್ತು facebook ಖಾತೆ.ಪ್ರಸಾದ್ ಹುಡುಗಿಯರ ಮುಂದೆ ನಿಂತು ಮಾತನಾಡಲು ತುಂಬಾ ಅಂಜಿಕೊಳ್ಳುತ್ತಿದ್ದ ಆದ್ರೆ facebook ನಲ್ಲಿ ದಿನ ಹೋದಂತೆ ಗೆಳೆಯರ ಸಂಪಾದನೆ ಏರಿಸಿಕೊಳ್ಳುತ್ತಾ  ವಾಟ್ಸಾಪ್ ಖಾತೆ ಗೆ ಒಂದೊಂದೇ ಹುಡುಗಿಯರ ನಂಬರ್ ಸೇರಿಸುತ್ತಾ ಬರಲಾರಂಭಿಸಿದ.ಹಾಗೆ ನೀರಜ್ ಸಹ ಆಕರ್ಷಣೆಯ ಬಲೆಗೆ ಬಿದ್ದು ಮನದಲ್ಲೇ ಒದ್ದಾಡ ತೊಡಗಿದ್ದ ಆ ಸಮಯದಲ್ಲಿ ಕಾಲೇಜಿನಲ್ಲಿ ಇದ್ದ ಇತರೆ ಹುಡುಗರು ಅದೇ ಹುಡುಗಿಯ ಮೇಲೆ ವಕ್ರದೃಷ್ಟಿ ಬೀರಿದ್ದನ್ನು ಸಹಿಸಲಾಗದೆ ಹೋಗಿ ಎದುರು ನಿಂತು i love u ಅಂತಾ ಹೇಳಿಯೇ ಬಿಟ್ಟಿದ್ದ ಮನದಲ್ಲಿದ್ದ ಅರಗಿಣಿ ನಂತರದ ದಿನದಿಂದ ಮುಖವನ್ನೇ ತೋರಿಸದಷ್ಟು ದೂರಮಾಡಿಕೊಂಡು puc ಯಲ್ಲೇ ವಿರಹ ಗೀತೆಗೆ ಮುನ್ನುಡಿ ಬರೆದಿದ್ದ.ಹಾಗೆ ದಿನಪೂರ್ತಿ facebook ನಲ್ಲಿ ಕಳೆದರು ಪ್ರಸಾದ್ ಮತ್ತು ನೀರಾಜ್ ಹಾಗೂ ಹೀಗೂ ಒದ್ದಾಡಿ ದ್ವಿತೀಯ ಪಿಯುಸಿ ಯನ್ನು ಮುಗಿಸಿದರು ಆದರೆ ಓದಿನಲ್ಲಿ ಮುಂದಿದ್ದ ಪ್ರಸಾದ್  facebook ಮತ್ತು ಸಹಜವಾಗಿ ವಯಸ್ಸಿನ ಏರಿಳಿತದ ಮೊದಲ ಸೆಳೆತಕ್ಕೆ ಸಿಕ್ಕಿ ಸಾಧಾರಣ ಮಾರ್ಕ್ಸ್ ಪಡೆದು ಉತ್ತೀರ್ಣ ನಾಗಿ ಡಿಗ್ರಿ ಬಂದು ತಲುಪಿದ್ದ.

ಮುಂದೊಂದಿನ ಹಿಂತಿರುಗಿದಾಗ

ನೆನಪಿನ ಮನೆಯಲಿ
ಒಂದು ಕೋಣೆ ತೆಗಿದಿದೆ.
ನನ್ನ ಕರೆದಿದೆ,ಬಾಲ್ಯವ ತೆರೆದು
ಕಣ್ಣಿಗೆ ಮುಸುಕು ಬಂದಿದೆ.

ಮರೆತ     ಮನವು
ನೆನಪುಗಳೊಡನೆ ಸಾಗಿದೆ.
ನಾ ತಿಳಿಯದೆ, ಬಾಲ್ಯದ ಬಯಕೆಗೆ
ಅಪ್ಪನ ಕೊಡುಗೆ ಕಂಡಿದೆ
ಖುಷಿ ಸಾಲದೆ.
ಗುರಿಯೊಂದಿಗೆ.

ಗೆಳೆಯರ ಬಳಗದಿ
ಕೂಡಿ ಮಾಡಿದ ಕಥೆಯಿದೆ.
ಒಂದು ವ್ಯಥೆಯಿದೆ,ನನ್ನಯ ತಪ್ಪಲು
ಅಮ್ಮನ ವಾದವು ಪರವಿದೆ.
ನನಗರಿವಿದೆ.

ನಗುವ ಮನಸು
ಹೇಳದೆ ಕೇಳದೇ ಮರೆಯಾಗಿದೆ.
ಗೊತ್ತಾಗಿದೆ,ವಯಸ್ಸು ಎಂಬುದು
ನಗುವನೆ ಕೊಂದು ಹಾಕಿದೆ.
ಗೊತ್ತಾಗದೆ.

ನೆನಪಿನ ಮನೆಯಲಿ
ಒಂದು ಕೋಣೆ ತೆಗೆದಿದೆ.
ನನ್ನ ಕರೆದಿದೆ, ಬಾಲ್ಯವ ತೆರೆದು
ಕಣ್ಣಿಗೆ ಮುಸುಕು ಬಂದಿದೆ.

ಸಂಕೇತ ಜಿ ಎಮ್ ತೀರ್ಥಹಳ್ಳಿ.

ಯವ್ವನ (10th to Degree)

ಮಾದರಿ ಶಾಲೆ ಅಲ್ಲೊಬ್ಬ ವಿದ್ಯಾರ್ಥಿ. ಓದಿನಲ್ಲಿ ಸಹಜವಾಗೆ ಚುರುಕು ಓದಿನಲ್ಲಿ ಮುಂದಿದ್ದು ಕೊಂಡೆ sslc ವರೆಗೂ ಬಂದು ತಲುಪಿದ್ದ.ವಯಸ್ಸು ಸಹಜವಾಗೇ ಜಾಸ್ತಿ ಆಗ್ತಾ ಬರುತ್ತಾ ಇತ್ತು.ಮನದೊಳಗೆ ಆಸೆಗಳು ಒಂದೊಂದೇ ಚಿಗುರೊಡೆಯಲು ಆರಂಭಿಸುತ್ತಿದ್ದವು ಅವನು SSLC ಬಂದಾಗ. ಆಗ ತಾನೇ ಕ್ಲಾಸಿನಲ್ಲಿ ಪ್ರೇಮಾ ಪಕ್ಷಿಗಳು ರವಿಯ ಕಿರಣ ಬಿದ್ದು ಮಂಜಿನ ಹನಿ ಹೊಳೆಯುವಂತೆ ಅಲ್ಲಲ್ಲಿ ಒಬ್ಬೊಬ್ಬರು ಕಾಣ ತೊಡಗಿದರು. ಈತನಿಗೆ ಹೊಸದು ಪ್ರೇಮ, ಪ್ರೀತಿ. ಪ್ರೀತಿ ಮಾಡಲು ಬಯಕೆ ಹುಡುಗಿ ಮುಂದೆ ಹೇಳಲು ಚಡಪಡಿಕೆ ಮತ್ತು ಪ್ರೀತಿ ಮಾಡಿದವರ ಮೇಲೆ ಆತ  ಹಗೆ ಕಾರಲಾರಂಭಿಸಿದ ಟೀಚರ್ ಗಳಿಗೆ ಪ್ರೇಮ ಪಕ್ಷಿಗಳ ಸುದ್ದಿ ಮುಟ್ಟಿಸಿ ಮಜಾ ಪಡೆದು ಕೊಳ್ಳುತ್ತಿದ್ದ,ಕಾರಣ ಆತನ ಮನದಲ್ಲಿರುವ ಹುಡುಗಿಯರು ಪ್ರೇಮಪಕ್ಷಿಗಳಾಗಿ  ರೇಕ್ಕೆ ಬಡಿದು ಹಾರಲು ಸಿದ್ದರಾಗುತ್ತಿದ್ದದನ್ನ ಸಹಿಸಾಲಗದೆ.
ಹಾಗೆ ಆತ ಕೊನೆಗೂ sslc ಮುಗಿಯುವುದರೊಳಗೆ ಮನದಲ್ಲಿ ನಾಲ್ಕೈದು ಹುಡ್ಗೀರಾ ನೆನಪಿಸಿ ಕೊಳ್ಳುತ್ತಾ ಹಾಗೋ ಹೀಗೋ ಕಾಲೇಜು ಮೆಟ್ಟಿಲು ಸೇರಿದ .ಆತನೇ ಪ್ರಸಾದ್

Monday 4 December 2017

ನಮ್ಮ ಕಾಲೇಜು

ಜ್ಞಾನ ಸಾಗರ ,ವಿದ್ಯಾದಾಗರ
ಬಾಳೆಬೈಲಿನಾ ಸಂಗಮ.

ತುಂಗಾ ನದಿಯ ಚಿಲುಮೆ
ಸಿದ್ದೇಶ್ವರ ಸ್ವಾಮಿಯ ನಡುವೆ.
ಮನದ ಚಿಂತನೆಗಳಿಗೆ
ಪರಿಸರದ ವರ್ಣನೆ.

ಗಣನೀಯ ಕಲಿಕೆ
ಮೌಲ್ಯಯುತ ತಿಳುವಳಿಕೆ.
ಪ್ರತಿ ಹೆಜ್ಜೆಯಲು
ಏಳಿಗೆಯ ಪರಿಬಾವಿಕೆ.

ಪ್ರಕೃತಿಯ ನಡುವೆ,
ನಡೆದಿದೆ ವಿಧ್ಯಕೃಷಿ.
ಆರೈಕೆಯ ನಡುವೆಯೇ
ನಡೆದಿದೆ ವಿದ್ಯಾರ್ಥಿ ವಿಕಸನ.

ಇಲ್ಲಿ ನಿರಂತರ ವಿಧ್ಯಧಾರೆ.
ನೀಗಿಸಿದೆ ಹಸಿವು ಮುಕ್ತ ಕೌಶಲವ.
ಅಧ್ಯಾಯಿಯ ರೂಪಿಸಿದೆ.
ಧೃತಿಗೆಡದೆ ಸಾಗಾಲು ಬದುಕಿನೊಡನೆ.

ಜ್ಞಾನ ಸಾಗರ.ವಿದ್ಯಾದಾಗರ
ಬಾಳೇಬೈಲಿನ ಸಂಗಮ.

ಸಂಕೇತ ಜಿ ಎಮ್.


ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...