Wednesday 6 December 2017

ಮಳೆಗಾಲದಲ್ಲಿ ತೀರ್ಥಹಳ್ಳಿ

ಜೂನ್ ಶುರು ಆಯ್ತು ಅಂದ್ರೆ ನಮ್ಮೂರಲ್ಲಿ ಮಳೆಯ ಸಿಂಚನ ಆರಂಭವಾಗುತ್ತೆ, ತುಂಗಾ ಮಾಲತಿ ಶರಾವತಿ ಧುಮ್ಮಿಕ್ಕಿ ಹರಿಯುವ ಕಾಲವದು.ರೈತರು ತಮ್ಮ ಕೃಷಿ ಚಟುವಟಿಕೆ ಗಳನ್ನು ಆರಂಭಿಸುವ ಸಮಯವದು. ಗಿಡಮರಗಳು ಸತತ ಬೇಸಿಗೆಯಿಂದ ಬಳಲಿ ಮಳೆಯ ಸಿಂಚನಕ್ಕೆ ನಿಟ್ಟುಸಿರು ಬಿಟ್ಟು ಹಚ್ಚ ಹಸಿರಿನಿಂದ ಸ್ವಚ್ಛವಾಗಿ ಕಂಗೊಳಿಸುವ ಸಮಯದಲ್ಲಿ ನಾವು ಕಾಯ್ತಾ ಇರ್ತಾ ಇದ್ದೇವು ಗದ್ದೆಯಲ್ಲಿ ನೀರಾಯ್ತಾ ಅಂತ ಆ ಶಾಲಾ ದಿನಗಳಲ್ಲಿ  ಒಂದು ಮಳೆ ಬಂದರೆ ಹೋಗಿ ಗದ್ದೆಯನ್ನು ನೋಡಿಕೊಂಡು ಬರೋದೆ ನಮ್ಮ ಕೆಲಸ  ಎಷ್ಟೋ ಸಲ ಮಳೆಬರಲಿ ಎಂದು ಕಾದು ಕುಳಿತದ್ದು ಇದೆ ಮನೆಯಲ್ಲಿ ಹೊಸ ಒಳ್ಳೆಯ battery ತನ್ನಿ , ಇರುವ ಬ್ಯಾಟರಿ ಗೆ ಒಳ್ಳೆಯ shell ಹಾಕಿಸಿಡಿ ಎಂದು ಹೇಳುತ್ತಿದ್ದದ್ದು ನೆನಪಿದೆ, ಕಾರಣ ನಾನು ಮಳೆಬರಲಿ ಎಂದು ಕಾಯುತ್ತಿದ್ದದ್ದು  ಮಳೆಗಾಲದಲ್ಲಿ  ನದಿಯ ಸಂಧಿಸುವ ಹಳ್ಳ ತೊರೆಗಳ ಮೂಲಕ ಗದ್ದೆಗೆ   ಬರುತ್ತಿದ್ದ ಹತ್ತು ಮೀನು ಕಡಿಯುವ ಆಸಕ್ತಿಯಿಂದಷ್ಟೇ.ಮುಂಗಾರುಮಳೆ ಆರಂಭವಾಗಿ ಸಿಹಿ ನೀರು  ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರಿದಾಗ ಮೀನು ಗಳು ಗದ್ದೆಯಲ್ಲಿ ಮೊಟ್ಟೆ ಇಡಲು ಹಳ್ಳಗಳ ಮೂಲಕ ಬರುತ್ತಿದ್ದವು. ರಾತ್ರಿಯಾಯಿತು ಎಂದರೆ ತಲೆಗೆ ಬ್ಯಾಟರಿ ಕಟ್ಟಿ ಕೈಯ್ಲಲಿ ಒಂದು ಚೀಲ ಒಂದು ಕತ್ತಿ ಹಿಡಿದು ನೀರಿಗೆ ಬ್ಯಾಟರಿ ಬಿಡುತ್ತಾ ಮೀನುಗಳನ್ನು ಹುಡುಕುವ ಜನರಿಗೇನು ಬರವಿರಲಿಲ್ಲ ,ರಾತ್ರಿ ಗದ್ದೆಯಲ್ಲಿ ನೂರಾರು ನಕ್ಷತ್ರಗಳು   ಪಳ ಪಳ ಪ್ರಜ್ವಲಿಸೋ ತರ ಬ್ಯಾಟರಿ ಗಳು ಪ್ರಜ್ವಲಿಸುತಿರುತ್ತವೆ.ಎಲ್ಲರೂ ಹುಡುಕುವುದು ಮೀನುಗಳನ್ನ ಅದರ ಮದ್ಯೆ ಕಾರೇಡಿ ಹಿಡಿಯುವುದು ಕೂಡ ಮರೆಯುವಂತಿಲ್ಲ.  ಮೊದಲು ಹಳ್ಳಗಳಲ್ಲಿ ಬ್ಯಾಟರಿ ಹೊಳಪಿಸಿ ಕಾರೇಡಿಯನ್ನು ಹಿಡಿದು ನಂತರ ಗದ್ದೆಗೆ ಬಂದು ಮೀನು ಕಡಿಯುತ್ತಿದ್ದ್ವು.ಮಲೆನಾಡಿನಲ್ಲಿ ನಮ್ಮ ಗದ್ದೆಗಳಲ್ಲಿ ಗಿರ್ಲು, ತೊಳೆಮೀನು, ಕಲ್ಮುಗ್ಗು, ಮುರ್ಗುಂಡು, ಕದಿಯಲು ಜನ ಸಾಗರವೆ ಹರಿದು ಬರುತ್ತಿತ್ತು, ಎಲ್ಲರ ಗುರಿ ಒಂದೇ ಆಗಿರುತ್ತಿತ್ತು ಏನಾದರೂ ಹೇಗಾದರೂ ಮಾಡಿ ಮುರ್ಗುಂಡು ಕಡಿಬೇಕು ಈ ಸಲ ಅಂತ,ಹಾಗೆ ಮೀನು ಕಡಿಯುವುದು ರಾತ್ರಿಯ ಕೆಲಸ ಮಲೆನಾಡಿಗರಿಗಾದರೆ ಹಗಲಲ್ಲಿ ಮುಳುಗಡೆ ಬಳಿ ಸೊಳ್ಳೆ ಪರದೆಯನ್ನು ಹಿಡಿದು ನೀರಿನಲ್ಲಿ ಹಾರುವ ಮೀನಿಗೆ ಬಲೆ ಹಿಡಿದು ಕೂರುವ ಕೆಲಸ, ಇಷ್ಟೇ ಅಲ್ಲ ಮಳೆಗಾಲದಲ್ಲಿ ಮಾಲ್ನಡಿಗರ ಪ್ರತಿಯೊಬ್ಬರ ಮನೆಯಲ್ಲೂ ಕೇಸಿನ ಸೊಪ್ಪಿನ ಪಲ್ಯ, ಏಳಸು ಬಿದಿರಿನ ಚಿಗುರು ಅಂದರೆ ಕಳಲೇ ಪಲ್ಯ ಅದನ್ನ ಮೂರ್ನಾಲ್ಕು ದಿನ ನೀರಿನಲ್ಲಿ ನೆನೆಸಿ ಮಾಡುತ್ತಿದ್ದರು, ಎತ್ತಿಗೆ ಹುರುಳಿ ಬೇಯಿಸುತ್ತಿದ್ದರು ಅದರ ಸಾರದಿಂದ ಮಳೆಗಾಲ ಮುಗಿಯೊವರೆಗೂ ಹುರುಳಿಕಟ್ಟು ಸಾರು,ಹೀಗೆ  ಒಂದೇರಡು ಮಳೆ ಬಂದು ಒಂದು ಮದ್ಯೆ ಬಿಸಿಲು ಬಂತು ಅಂದರೆ ಎಲ್ಲೆಡೆ ಅಣಬೆಯದ್ದೇ ಪಾರುಪತ್ಯ ಯಾವ ಹಡ್ಡೆಯಲ್ಲಿ ನೋಡಿದರು ಹೆಂಗಸರು ಮಕ್ಕಳು ನಿಂತು ಅಣಬೆ ಎತ್ತುವುದಷ್ಟೇ ಕೆಲಸ,ಹೈಗಿನ್ ಅಣಬೆ, ದೂಪದ್ ಅಣಬೆ, ಹೆಗ್ಗಲ್ ಅಣಬೆ, ಚುಲ್ಲಣಬೆ, ಅಕ್ಕಿ ಅಣಬೆ,ಹುಲ್ಲು ಅಣಬೆ, ಪಟ್ಟಣದಿಂದ ಹಲ್ಲಿಯೆಡೆಗೆ ಅಣಬೆ ಕೀಳಲು ಬರುತ್ತಿದ್ದ ಜನರಿಗಂಟು ಕಮ್ಮಿಯೇ  ಇರಲಿಲ್ಲ.ಅಣಬೆಯ ಕಾಲ ಮುಗಿಯುತ್ತಿದ್ದಂತೆ  ಎಲ್ಲೋ ಮೂಲೆಯಲ್ಲಿದ್ದ ಕಂಬಳಿಯನ್ನ ಹೊರತೆಗೆದು ಒಲೆಯ ಮೇಲೆ ಬಿಸಿಲುಕಣೆ ಮಾಡಿ ಕಂಬಳಿಯನ್ನ ಹಾಕೊಂಡು ಹಾಳೆ ಕೊಟ್ಟೆ ತಲೆಗೇರಿಸಿ ಸಸಿ ಅಗಡಿ ಕಡೆ ಹೊರಟು ಹೋಳ್ಕೆ  ಹೊಡೆದು ಭತ್ತದ ಬೀಜ ನೆನೆಸಿ ಹೂಟಿ ಮಾಡಿ  ಸಸಿ ಹಾಕಿಯೇ ಬಿಡುತ್ತಿದ್ದರು,ನಂತರ ಒಂದು ತಿಂಗಳ ನಂತರ ನಟ್ಟಿ ಮಾಡಿ ಮುಗಿಸುತ್ತಿದ್ದರು ನಟ್ಟಿ ಎಂದರೆ ನೆನಪಾಗೋದು ಮಲೆನಾಡ ಹೆಂಗಸರು ಗೋರಬನ್ನ ಹಾಕೊಂಡು ಬರ್ತಾ ಇರೋದು.ಹಾಗೋ ಹೀಗೋ ಗಾಜನೂರು ಆಳೋ ಅಥವಾ ಊರಿನ ಜನರ ಸಹಾಯದಿಂದ ಗದ್ದೆ ನಟ್ಟಿ ಮುಗಿಸಿ ಮನೆಯಲ್ಲಿ ಬೆಚ್ಚಗೆ ಕುಳಿತು ಬಿಡುವುದೇ ಮಲೆನಾಡಿನ ಜನರ ಮಲೆನಾಡಿನ ಕಾಯಕ.ನಟ್ಟಿ ಕೆಲಸವೆಲ್ಲ ಮುಗಿದನಂತರ ಜನರು ಕಾಡಿನ ಕಡೆ ಮುಖ ಮಾಡಿ ಮುರುಗನಾ ಹುಳಿ ಕೊಯ್ದು ಒಣಿಸಿ ಮಾರಾಟ ಮಾಡುವ ಕಾಯಕಕ್ಕೆ ಇಳಿದು ಬಿಡುತ್ತಾರೆ.ಆಮೇಲೆ ಹಳ್ಳಗಳಲ್ಲಿ ಕೂಣಿ ಒಡ್ಡುವುದು ಮರೆಯದೆ ಮಾಡುತ್ತಿದ್ದ ಕೆಲಸವದು. ಆಶ್ಲೇಷ ಮಳೆಯಲ್ಲಿ ಯಮ ಚಳಿ ದನಕರುಗಳೀಗೆ ಯಮ ಕಿಂಕರರು ಕಾಯುತ್ತ ಕುಳಿತಿರುತ್ತಿದ್ದರು ಮಲೆನಾಡಿಗರಿಗೆ ಕರುಗಳನ್ನ ಉಳಿಸಿಕೊಳ್ಳಲು ಹೈರಾಣಗಿರುತ್ತಿದ್ದರು  ಮೃಗಶಿರ ಮಳೆಯಲ್ಲಿ ಸಸಿಹಾಕಿ ಆದ್ರೆ ,ದೊಡ್ಡುವರ್ಷ,ಸಣ್ಣವರ್ಷ,ಆಶ್ಲೇಷಾ ಮಳೆಯೊಳಗೇ ನಟ್ಟಿ ಕೆಲಸ ಮುಗಿದಿರುತ್ತಿತ್ತು.ಹೀಗೆ ಮಲೆನಾಡಿಗಾರು ಏಡಿ ಮೀನು ಸಾರು ಅಂತ ಬೇಸಿಗೆಯಲ್ಲಿ ಮಾಡಿದ್ದ ಅಡ್ಡುಳಿ ಸೀಸ ವನ್ನು ಕಾಲಿ ಮಾಡುತ್ತ ಗದ್ದೇಕೊಯ್ಲು ಆಡಿಕೆ ಕೊಯ್ಲುಗಾಗಿ ಚಳಿಗಾಲ ವನ್ನು ಬರಮಾಡಿಕೊಳ್ಳುವರು

No comments:

Post a Comment

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...